Bengaluru

ಆನ್-ಲೈನ್ ಶಿಕ್ಷಣ ದೂರು,ಕಟ್ಟುನಿಟ್ಟಿನ ಅನುಪಾಲನೆಗೆ ಸಚಿವ ಸುರೇಶ ಕುಮಾರ ಸೂಚನೆ

ಬೆಂಗಳೂರು,ನ 06- ಆನ್-ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಪೋಷಕರ-ಸಾರ್ವಜನಿಕರ ಯಾವುದೇ ದೂರುಗಳಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣವಾಣಿ- ಸಾರ್ವಜನಿಕ ಸಹಾಯವಾಣಿಗೆ ಫೋನ್ ಕರೆ ಮೂಲಕ ದಾಖಲಿಸಬಹುದೆಂದು ಎಂದು ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ ತಿಳಿಸಿದ್ದಾರೆ.

ಇಂದು ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಆನ್-ಲೈನ್ ಶಿಕ್ಷಣ ಕುರಿತಂತೆ ಹೊರಡಿಸಲಾದ ಸೂಚನೆಗಳನ್ವಯ ಸೂಕ್ತ ಅನುಪಾಲನಾ ವ್ಯವಸ್ಥೆ ಜಾರಿಯ ಲ್ಲಿಡುವ ಕುರಿತು ಮತ್ತು ಈ ಸುತ್ತೋಲೆಗಳ ಅನುಷ್ಠಾನದಲ್ಲಿ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದ ಅವರು,ಸಾರ್ವಜನಿಕರು ಆನ್‍ಲೈನ್ ಕುರಿತ ದೂರುಗಳನ್ನು ಶಿಕ್ಷಣವಾಣಿ-ಸಹಾಯವಾಣಿಗೆ (18004257302) ಇಲ್ಲವೇ ಸಹಾಯವಾಣಿ ವಾಟ್ಸ್-ಆಪ್ ಸಂಖ್ಯೆ-9483045130) ಸಲ್ಲಿಸಿ ಇಲಾಖೆಯ ಗಮನಕ್ಕೆ ತರುವ ಮೂಲಕ ಸಹಾಯವಾಣಿಯ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಇಂತಹ ದೂರುಗಳನ್ನು ನಿರ್ವಹಿಸಲು ಕೂಡಲೇ ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿ ಕಾರಿಯನ್ನು ನೇಮಿಸಬೇಕು. ಬೆಂಗಳೂರು, ಕಲ್ಬುರ್ಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗಿರುವುದರಿಂದ ಅಧಿಕಾರಿಗಳು ಆನ್-ಲೈನ್ ಶಿಕ್ಷಣದಲ್ಲಿನ ಸಮಸ್ಯೆಗಳನ್ನು ಮತ್ತು ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕ ರಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಶನಿವಾರ ನಗರಗಳ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಬೇಕೆಂದು ಇಲಾಖೆಯ ಆಯು ಕ್ತರಿಗೆ ಸಚಿವರು ಸೂಚಿಸಿದರು.

ಯಾವುದೇ ಶಾಲೆಗಳಿರಲಿ ಆನ್-ಲೈನ್ ಶಿಕ್ಷಣವನ್ನು ತಜ್ಞರ ಸಮಿತಿ ಶಿಫಾರಸಿನನ್ವಯ ಇಲಾಖೆ ಹೊರಡಿಸಿರುವ ಸುತ್ತೋಲೆಗಳನ್ವಯ ವೈಜ್ಞಾನಿಕವಾಗಿಯೇ ನಿರ್ವಹಿಸುವ ಕುರಿತು ಅಗತ್ಯ ಅನುಪಾಲನಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಬಿಇಒಗಳು ಆನ್-ಲೈನ್ ತರಗತಿಗಳ ಪರಾಮರ್ಶೆ ಮಾಡುವ ದರೊಂದಿಗೆ ಕೇಂದ್ರ ಕಚೇರಿಯಲ್ಲಿ ಈ ಕುರಿತ ಮಾಹಿತಿ ಯಾವುದೇ ಸಂದರ್ಭದಲ್ಲಿಯೂ ದೊರೆಯವಂತಾಗಬೇಕುಕೆಂದು ಸುರೇಶ ಕುಮಾರ ಸೂಚಿಸಿದರು.ಈ ಬಗ್ಗೆ ಕೂಡಲೇ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕೆಂದೂ ಸಹ ನಿರ್ದೇಶನ ನೀಡಿದರು.

ಆನ್-ಲೈನ್ ಬೋಧನೆಯನ್ನು ಹಗಲು-ರಾತ್ರಿಯನ್ನದೇ ಯಾವುದೇ ಸಮಯದಲ್ಲೂ ಮಾಡಲಾಗುತ್ತಿದ್ದು,ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾ ಗುತ್ತದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಆನ್-ಲೈನ್ ಬೋಧನೆಗೆ ತರಗತಿಗಳ ಅವಧಿಯನ್ನು ನಿಗದಿಪಡಿಸಿದಂತೆ ಆನ್‍ಲೈನ್ ಬೋಧನಾ ಶಾಲಾವಧಿಯ ನ್ನು ನಿಗದಿಪಡಿಸಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿ ಗೆ ಸೂಚಿಸಿದರು.

ಈ ಕುರಿತಂತೆ ಜಿಲ್ಲೆ, ತಾಲೂಕು, ಬಿಆರ್‍ಸಿ, ಸಿಆರ್‍ಪಿ ಮಟ್ಟದಲ್ಲಿ ಶಾಲಾವಧಿಯನ್ನು ಗಮನಿಸಲು ಅಗತ್ಯ ಕ್ರಮ ವಹಿಸಬೇಕು.ಹಾಗೆಯೇ ಈ ಕುರಿತ ಸಮಸ್ಯೆಗ ಳಿದ್ದಲ್ಲಿ ಶಿಕ್ಷಣವಾಣಿ ಸಹಾಯವಾಣಿಗೆ ದೂರುಗಳನ್ನು ಸಲ್ಲಿಸುವ ವ್ಯವಸ್ಥೆ ಮಾಡಬೇಕೆಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!