New Delhi

ಪಶ್ಚಿಮ ಬಂಗಾಳ- ಮಹಾರಾಷ್ಟ್ರದಲ್ಲೂ ಪಟಾಕಿ ನಿಷೇಧ

ನವದೆಹಲಿ, ನ 6- ಕೊರೋನ ಸೋಂಕು ಹಾಗೂ ಪಟಾಕಿ ಸುಡುಮದ್ದಿನ ನ ಹೊಗೆ ಮಾಲಿನ್ಯದಿಂದ ವಾತಾವರಣ, ಮತ್ತು ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಪರಿಣಾಮಗಳನ್ನು ಅವಲೋಕಿಸಿ ಈ ಬಾರಿ ದೀಪಾವಳಿಗೆ ಪಟಾಕಿಯನ್ನು ನಿಷೇಧಿಸಿ ಸರಳವಾಗಿ ಹಾಗೂ ಕೋವಿಡ್ ಮಾರ್ಗ ಸೂಚಿಗಳ ಅನ್ವಯ ಆಚರಣೆ ಮಾಡಲು ಸೂಚಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಳಿಪೂಜೆಯ ವೇಳೆ ಪಟಾಕಿಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಿ ಅಲ್ಲಿನ ಕೊಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ. ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ನ್ಯಾಯಪೀಠ ಈ ಸೂಚನೆ ನೀಡಿದೆ. ನ.15ರಂದು ಕಾಳಿ ಪೂಜೆ ನಡೆಯಲಿದೆ. ಜಗದ್ಧಾತ್ರಿ ಪೂಜೆ, ಛತ್ ಹಾಗೂ ಕಾರ್ತಿಕ ಪೂಜೆಗೂ ಇದು ಅನ್ವಯವಾಗಲಿದೆ. ಜತೆಗೆ ದೇವರ ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆಗೂ ನಿರ್ಬಂಧ ಹೇರಲಾಗಿದೆ.

ಮಹಾರಾಷ್ಟ್ರದಲ್ಲೂ ಕೋವಿಡ್ ಪ್ರಕರಣಗಳು ಇರುವ ಕಾರಣ ಪಟಾಕಿ ಬದಲು ದೀಪ ಬೆಳಗಿಸಿ ದೀಪಾವಳಿ ಆಚರಿಸಲು ಸೂಚನೆ ನೀಡಲಾಗಿದೆ, ಅಲ್ಲದೆ ಆರೋಗ್ಯದ ಹಿತ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.

ಪ್ರಸ್ತುತ, ಪುಣೆ, ಥಾಣೆ, ಮುಂಬೈ, ನಾಸಿಕ್, ನಾಗ್ಪುರ, ಚಂದ್ರಪುರ, ರಾಯಗಡ ಮತ್ತು ಸಾತಾರಾದಲ್ಲಿ ಗರಿಷ್ಠ ಸಂಖ್ಯೆಯ ಸಕ್ರಿಯ ರೋಗಿಗಳಿದ್ದು ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಪಟಾಕಿ ನಿಷೇಧಿಸುವಂತೆ ಹೇಳಿದೆ.

ಇದೇ ವೇಳೆ, ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದರಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಜ್ಞರು ಎಚ್ಚರಿಸಿದ್ದು, ಪಟಾಕಿ ಬಳಕೆ ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!