Sawadatti

80, 000 ರೂಪಾಯಿ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಇಂಜಿನೀಯರ

ಸವದತ್ತಿ, ೬- ತಾಲೂಕಿನ ಮುನವಳ್ಳಿ ಪುರಸಭೆ ಕಿರಿಯ ಅಭಿಯಂತ ವೆಂಕಪ್ಪ ಕಾಮ್ಮನವರ ಗುತ್ತಿಗೆದಾರರೊಬ್ಬರಿಂದ 80000 ರೂಪಾಯಿ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಸಾರ್ವಜನಿಕ ಕಾಮಗಾರಿ ವಿಭಾಗದಲ್ಲಿ ಕಾಮಗಾರಿಯೊಂದನ್ನು ಪೂರ್ಣಗೊಳಿಸಿದ್ದ ಗುತ್ತಿಗೆದಾರ ದುರ್ಗಪ್ಪ ಕಿನ್ನೂರಿ ಬಿಲ್ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅಭಿಯಂತ ಕಾಮ್ಮನವರ ಬಿಲ್ ಮಂಜೂರು ಮಾಡಲು 1.40 ಲಕ್ಷ ರೂಪಾಯಿ ಲಂಚ ಕೇಳಿ ಅವರಿಂದ 60, 000 ರೂಪಾಯಿ ಪಡೆದಿದ್ದರು. ಉಳಿದ ಹಣ ಕೊಡಲು ಮನಸಿಲ್ಲದ ಗುತ್ತಿಗೆದಾರ ಕಿನ್ನೂರಿ ಅವರು ಬೆಳಗಾವಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿ ಅವರ ಸೂಚನೆ ಮೇರೆಗೆ ಲಂಚದ ಉಳಿದ ಮೊತ್ತವಾದ 80, 000 ರೂಪಾಯಿ ಇಂದು ಶುಕ್ರವಾರ ನೀಡಿದ್ದಾರೆ.

ಗುತ್ತಿಗೆದಾರ ಕಿನ್ನೂರಿ ಲಂಚದ ಹಣ ನೀಡಿ ಕಚೇರಿಯಿಂದ ಹೊರಬರುತ್ತಿದಂತೆಯೇ ಕಚೇರಿ ಒಳಹೋದ ಎಸಿಬಿ ಅಧಿಕಾರಿಗಳು ಅಭಿಯಂತ ಕಾಮ್ಮನವರ ಅವರನ್ನು ಲಂಚದ ಹಣ ಸಮೇತ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!