Belagavi

ಶಾಸಕಿ ಡಾ ಅಂಜಲಿ ಗೆಲುವು ಬಹುತೇಕ ನಿಶ್ಚಿತ, ಮಹಾರಾಷ್ಟ್ರದ ರೆಸಾರ್ಟ್ ದಿಂದ ನೇರ ಮತಗಟ್ಟೆಗೆ ಬರಲಿದ್ದಾರೆ ಬೆಂಬಲಿಗರು

ಬೆಳಗಾವಿ : ಬೆಳಗಾವಿಯ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಮೂರು ಸ್ಥಾನಗಳಿಗೆ ನಾಳೆ ಶುಕ್ರವಾರ ಚುನಾವಣೆ ನಡೆಯಲಿದೆ.

ಮುಂಜಾನೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಕೆ ಮಾಡೆಲ್ ಹಾಯಸ್ಕೂಲ್ ನಲ್ಲಿ ಮತದಾನ ನಡೆಯಲಿದೆ. ಮಾತದಾನ ಮುಗಿದ ನಂತರ ಅದೇ ಕೇಂದ್ರದಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಒಟ್ಟು 16 ಸ್ಥಾನಗಳ ಆಡಳಿತ ಮಂಡಳಿಗೆ 13 ಕ್ಷೇತ್ರಗಳ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಖಾನಾಪೂರ ಹಾಗು ರಾಮದುರ್ಗ ತಾಲೂಕಿನ ಪಿಕೆಪಿಎಸ್, ನೇಕಾರ ಸಹಕಾರಿ ಕ್ಷೇತ್ರದ ಪ್ರತಿನಿಧಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಈ ಮೂರು ಕ್ಷೇತ್ರಗಳ ಪೈಕಿ ಖಾನಾಪೂರದ ಮಾಜಿ ಶಾಸಕ ಅರವಿಂದ ಪಾಟೀಲ ಮತ್ತು ಶಾಸಕಿ ಅಂಜಲಿ ನಿಂಬಾಳ್ಕರ ನಡುವೆ ಬಿರುಸಿನ ಪೈಪೋಟಿ ನಡೆದಿದೆ.

ಅಂಜಲಿ ಗೆಲುವು ಬಹುತೇಕ ನಿಚ್ಚಳವಾಗಿದೆ. ಖಾನಾಪುರ ತಾಲೂಕಿನಲ್ಲಿ 48 ಪಿಕೆಪಿಎಸ್ ಇದ್ದು, ಅದರಲ್ಲಿ 28 ಜನರು ಶಾಸಕಿ ಅಂಜಲಿಯವರನ್ನು ಬೆಂಬಲಿಸಿದ್ದು, ಅವರೆಲ್ಲರನ್ನು ಮಹಾರಾಷ್ಟ್ರದ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದ್ದು ನಾಳೆ ನೇರವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!