Bengaluru

ಜನವಿರೋಧಿ ಸಕಾ೯ರ – ಸಿಪಿಎಂ

ಬೆಂಗಳೂರು, ನ 5- ವಿಧಾನ ಪರಿಷತ್ ಹಾಗೂ ವಿಧಾನ ಸಭಾ ಉಪ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ, ರಾಜ್ಯ ಸರಕಾರ ತನ್ನ ಕಡು ಜನ ವಿರೋಧಿ ನೀತಿಯನ್ನು ಮತ್ತೊಮ್ಮೆ ಬಯಲುಗೊಳಿಸಿದೆ ಎಂದು ಸಿಪಿಐಎಂ ಆರೋಪಿಸಿದೆ.

ಜನತೆ ಕೋವಿಡ್ ೧೯ ರ ಸಂಕಷ್ಟದಲ್ಲಿರುವಾಗ, ಉದ್ಯೋಗದ ಗಂಭೀರ ಸಮಸ್ಯೆಗಳನ್ನೆದುರಿಸುತ್ತಿರುವಾಗ ಕೆಎಸ್‌ಆರ್‌ಟಿಸಿ ಬಸ್ ದರಗಳನ್ನು ಶೇ 10 ಕ್ಕೂ ಅಧಿಕವಾಗಿ ಒಳಗಿಂದೊಳಗೆ ಏರಿಸಿದೆ. ಬಿಎಂಟಿಸಿ ಖಾಸಗೀಕರಣಕ್ಕೆ ಕುತಂತ್ರ ನಡೆಸಿದೆ.

ಅದೇ ರೀತಿ, ರೈತರ ತೀವ್ರ ವಿರೋಧದ ನಡುವೆಯೂ, ಭೂ ಸುಧಾರಣೆ ಎರಡನೇ ತಿದ್ದುಪಡಿ ಸುಗ್ರೀವಾಜ್ಞೆ ಜಾರಿ ಮಾಡಲಾಗಿದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜು ಟೀಕಿಸಿದ್ದಾರೆ.

ವಿದ್ಯುತ್ ಸರಬರಾಜನಲ್ಲಿರುವ ದೋಷಗಳನ್ನು ಮೊದಲು ಸರಿಪಡಿಸಿ, ಕೆಲವು ದೊಡ್ಡ ಕಂಪನಿಗಳ ವಿದ್ಯುತ್ ಕಳ್ಳತನವನ್ನು ತಡೆಯಬೇಕಾಗಿದೆ. ಇದನ್ನು ಬಿಟ್ಟು ವಿದ್ಯುತ್ ದರ ಏರಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!