Bhagalpur

ಗಂಗಾ ನದಿಯಲ್ಲಿ ದೋಣಿ ಮುಗುಚಿ 30 ಕ್ಕೂ ಹೆಚ್ಚು ಮಂದಿ ಸಾವು ಶಂಕೆ

ಭಾಗಲಪುರ, ನ 5- ಬಿಹಾರದ ಭಾಗಲಪುರ ಜಿಲ್ಲೆಯ ಗೋಪಾಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಟಂಗಾ ಗ್ರಾಮದ ಸಮೀಪದ ಗಂಗಾ ನದಿಯಲ್ಲಿ ನಾಡ ದೋಣಿಯೊಂದು ಮಗುಚಿ 30 ಕ್ಕೂ ಹೆಚ್ಚು ಜನರು ನೀರುಪಾಲಾಗಿರುವ ಶಂಕೆ ಇದೆ.

ಕೃಷಿ ಕೆಲಸಗಳಿಗಾಗಿ ಸುಮಾರು 40 ಜನರು ದೋಣಿ ಮೂಲಕ ನದಿ ದಾಟುತ್ತಿದ್ದರು ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಕುನಾಲ ಚಕ್ರವರ್ತಿ ಹೇಳಿದ್ದಾರೆ.

ಟಿಂಟಂಗಾ ಗ್ರಾಮದ ಬಳಿಯ ದರ್ಶನ ಮಾಂಜಿ ದಡದಲ್ಲಿ ಜನರು ದೋಣಿ ಹತ್ತಿದ್ದರು. ಅತಿ ಭಾರದಿಂದ ದೋಣಿ ನದಿಯ ಮಧ್ಯೆ ಮುಳುಗಿದೆ ಎಂದು ಅವರು ಹೇಳಿದ್ದಾರೆ.
ಈ ಪೈಕಿ 8 ಜನರು ಈಜಿ ಸುರಕ್ಷತವಾಗಿ ದಡ ಸೇರಿದ್ದಾರೆ. ಟಿಂಟಂಗಾ ಗ್ರಾಮದ ಸುನೈನಾ ದೇವಿ ಎಂದು ಗುರುತಿಸಲ್ಪಟ್ಟ ಮಹಿಳೆಯ ಮೃತದೇಹವನ್ನು ಸ್ಥಳೀಯರು ನದಿಯಿಂದ ಹೊರ ತೆಗೆದಿದ್ದಾರೆ.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ನಾಪತ್ತೆಯಾದವರ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಶೋಧ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್ ನ ಒಂದು ತಂಡ ಸಹ ಸಹಕರಿಸುತ್ತಿದೆ.

Leave a Reply

Your email address will not be published. Required fields are marked *

Back to top button
error: Content is protected !!