Bengaluru

ವಿದ್ಯುತ್ ದರ ಏರಿಕೆ ಖಂಡನೀಯ

ಬೆಂಗಳೂರು, ನ 5- ರಾಜ್ಯ ಸರ್ಕಾರ ಕೋರೋನಾದಿಂದ ತತ್ತರಿಸುತ್ತಿರುವ ಜನತೆಯ ಮೇಲೆ ವಿದ್ಯುತ್ ದರ ಏರಿಕೆಯ ಬರೆ ಹಾಕಿರುವುದನ್ನು ವಿಧಾನಪರಿಷತ್ತಿನ ಪ್ರತಿಪಕ್ಷ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಖಂಡಿಸಿದ್ದಾರೆ.

ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿ, ಅವೈಜ್ಞಾನಿಕ ಲಾಕ್ ಡೌನ್ ನಿಂದಾಗಿ ಜನ ದುಸ್ಥಿತಿಗೆ ತಲುಪಿದ್ದಾರೆ. ಗಾಯದ ಮೇಲೆ ಬರೆ ಎಳೆಯುವಂತೆ ವಿದ್ಯುತ್ ಶುಲ್ಕ ಏರಿಸಿ ಸರ್ಕಾರ ರಾಜ್ಯದ ಜನರ ಲೂಟಿಗೆ ಇಳಿದಿದೆ. ಜನ ಸಂಕಷ್ಟದಲ್ಲಿದ್ದರೂ ಸರ್ಕಾರ ಮಾತ್ರ ತನ್ನ ಬೊಕ್ಕಸ ತುಂಬಿಸುವ ಪ್ರಯತ್ನ ನಡೆಸಿರುವುದು ಖಂಡನೀಯ ಎಂದು ಹೇಳಿದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ) 2020-21ನೇ ಸಾಲಿನ ವಿದ್ಯುತ್ ದರ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಯೂನಿಟ್ ಗೆ ಸರಾಸರಿ 40 ಪೈಸೆಯಷ್ಟು ದರ ಹೆಚ್ಚಿಸಿದೆ. ಜನರಿಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ. ಒಂದು ವರ್ಷಗಳ ಕಾಲ ದರ ಏರಿಕೆಯ ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಎಸ್.ಆರ್.ಪಾಟೀಲ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!