Bengaluru

ನಿಜವಾಯ್ತು ಸಿದ್ದು ಭವಿಷ್ಯ : ಮೋದಿ ಮುಖನೋಡಿ ಮತ ನೀಡೊಲ್ಲ

ಬೆಂಗಳೂರು, ೫- ಇಡೀ ವಿಶ್ವವೇ ಎದುರು ನೋಡುತ್ತಿರುವ ಅಮೆರಿಕಾದ ಅಧ್ಯಕ್ಷಿಯ ಚುನಾವಣೆ ವಿಷಯದಲ್ಲಿ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ನುಡಿದ ಭವಿಷ್ಯ ನಿಜವಾಗಿದೆ.

ಅಮೇರಿಕದಲ್ಲಿರುವ ಭಾರತೀಯರು ಕಳೆದ ವರುಷ ಪ್ರಧಾನಿ ಮೋದಿಯವರನ್ನು ಅಮೆರಿಕೆಗೆ ಆಹ್ವಾನಿಸಿ “ಹೌಡಿ ಮೋದಿ” ಕಾರ್ಯಕ್ರಮ ಏರ್ಪಡಿಸಿದ್ದರು. ಅದಕ್ಕೆ ಅಮೇರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ವಿಶೇಷ ಅತಿಥಿಯೆಂದು ಆಹ್ವಾನಿಸಿದ್ದರು. ತಾವು ಚುನಾವಣೆಯಲ್ಲಿ ಮರು ಆಯ್ಕೆಯಾಗಬೇಕಿದ್ದರೆ ಭಾರತೀಯರ ಮತಗಳೂ ಪ್ರಮುಖವೆಂದರಿತು ಟ್ರಂಪ್ ಆಸಕ್ತಿಯಿಂದ ಪಾಲ್ಗೊಂಡು ಭಾಷಣವನ್ನೂ ಮಾಡಿ “ಮೋದಿ ನನ್ನ ಅತ್ತ್ಯುತ್ತಮ ಸ್ನೇಹಿತ” ಎಂದು ಬಣ್ಣಿಸಿದ್ದರು.

ಆಗಲೇ ಸಿದ್ದರಾಮಯ್ಯ “ಮೋದಿ ಮುಖನೋಡಿ ಅಮೇರಿಕೆಯ ಭಾರತೀಯರು ಟ್ರಂಪ್ ಗೆ ಮತ ಹಾಕಲ್ಲ” ಎಂದಿದ್ದರು. ಅಮೇರಿಕೆಯ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ ಕೊನೆ ಹಂತಕ್ಕೆ ಬಂದಿದ್ದು ಟ್ರಂಪ್ ಹಿಂದಿದ್ದಾರೆ ಹಾಗಾಗಿ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಮೆರಿಕಾದಲ್ಲಿ ಮೋದಿ ಹೆಸರು ನಡೆಯೋದಿಲ್ಲ. ಟ್ರಂಪ್ ಖಚಿತವಾಗಿ ಸೋಲು ಅನುಭವಿಸುತ್ತಾರೆ ಎಂದು ಹೇಳಿದರು.

“ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿ ಕೊಂಡು ಮತಯಾಚಿಸಿದ್ದಾರೆ‌. ಆದರೆ ಅಮೆರಿಕಾ ಚುನಾವಣೆಯೇ ಬೇರೆ. ಅಲ್ಲಿನ ಜನರು ಮೋದಿ ಮುಖ ನೋಡಿ, ಹೆಸರು ಕೇಳಿ ವೋಟು ಹಾಕಲ್ಲ” ಎಂದು ಹೇಳಿದರು. ಅದರಂತೆ ಜೋ ಬಿಡನ್ ಗೆಲುವು ಬಹುತೇಕ ಖಚಿತವಾಗಿದೆ.

ಬಿಡೆನ್ ಪ್ರಸ್ತುತ 264 ಚುನಾವಣಾ ಮತಗಳನ್ನು ಪಡೆದಿದ್ದಾರೆ. ಅವರು ಇನ್ನೂ 6 ಎಲೆಕ್ಟೊರಲ್ ಮತಗಳನ್ನು ಪಡೆದರೆ ಅವರು ಮ್ಯಾಜಿಕ್ ನಂಬರ್ ತಲುಪುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!