Vijayapur

ಬೈಕ್ ಗಳ ಢಿಕ್ಕಿ, ಮೂವರ ದುಮ೯ರಣ

ಬಬಲೇಶ್ವರ, ೫- ಎರಡು ಬೈಕ್ ಗಳ ನಡುವೆ ಮುಖಾಮುಖ ಢಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಮೂವರು ಅಸುನೀಗಿದ ದುರ್ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ಗುರುವಾರ ನಡೆದಿದೆ.

ಅಪಘಾತದಲ್ಲಿ ಓರ್ವನಿಗೆ ಗಾಯಗಳಾಗಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ನಿವಾಸಿಗಳಾದ ಲಕ್ಷ್ಮಣ ಮಾದರ (45), ಕಾಶೀಬಾಯಿ ಲಕ್ಷ್ಮಣ ಮಾದರ (40), ಗಲಗಲಿ ಗ್ರಾಮದ ಅನೀಲ ರಾಚಣ್ಣ ಮೆಳ್ಳಿಗೇರಿ ( 25) ಮೃತರು.

ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಶಿವಪೂಜಯ್ಯ ಹಿರೇಮಠ ಅವರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಬಾಗಲಕೋಟ ಆಸ್ಪತ್ರೆಗೆ ಸಾಗಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!