New Delhi

ಎನ್‌ಡಿಎ ಸರ್ಕಾರ ಮಾತ್ರ ಬಿಹಾರದ ಯುವಕರಿಗೆ ಅವಕಾಶ ಮತ್ತು ಭದ್ರತೆ ಒದಗಿಸಲಿದೆ; ಮೋದಿ

ನವದೆಹಲಿ, ನ 4- ‘ಆತ್ಮನಿರ್ಭರ ಭಾರತ’ದಲ್ಲಿ ಸರ್ಕಾರದ ಉದ್ದೇಶ ಕಾನೂನು ಸಂರಕ್ಷಣೆ, ಬಡವರ ಕಲ್ಯಾಣ, ಯುವಕರಿಗೆ ಹೆಚ್ಚಿನ ಅವಕಾಶ ಮತ್ತು ಮಹಿಳೆಯರ ಭದ್ರತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್ ಮತ್ತು ಸಬ್‌ ಕಾ ವಿಶ್ವಾಸ್ ನಮ್ಮ ಮಂತ್ರವಾಗಿದೆ’ ಎಂದಿದ್ದಾರೆ.
ಭ್ರಷ್ಟಾಚಾರ ಅಭಿವೃದ್ಧಿಯ ಬಹುದೊಡ್ಡ ಶತ್ರುವಾಗಿದೆ ಮತ್ತು ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಬ್ಯಾಂಕ್‌ ಖಾತೆಗಳು, ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಸಂಪರ್ಕಿಸುವುದರಿಂದ ಎನ್‌ಡಿಎ ಸರ್ಕಾರ ಬಡವರಿಗೆ ಅವರ ಹಕ್ಕುಗಳನ್ನು ಒದಗಿಸಿದೆ ಮತ್ತು ಎಲ್ಲಾ ಕಪ್ಪು ಆದಾಯಗಳ ಬಾಗಿಲು ಮುಚ್ಚಿದೆ. ಈಗ ಬಡವರು ಹಲವು ಯೋಜನೆಗಳ ಹಣವನ್ನು ತಮ್ಮ ಖಾತೆಗಳಿಗೆ ನೇರವಾಗಿ ಪಡೆಯುತ್ತಿದ್ದಾರೆ ಎಂದರು.
ಬಿಹಾರದಲ್ಲಿ ಇಂದು ಬಡವರು ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಗುರಿಯಾಗಿದೆ. ಕೊರೋನಾ ಸಮಯದಲ್ಲಿ ಅವರಿಗೆ ಉಚಿತ ದಿನಸಿ ಮತ್ತು ಇತರ ನೆರವನ್ನು ಒದಗಿಸಲಾಗಿದೆ. ಇಲ್ಲಿನ ರೈತರಿಗೆ ಎನ್‌ಡಿಎ ಸರ್ಕಾರ ಮಾಡಿದಷ್ಟು ಕೆಲಸವನ್ನು ಬೇರೆ ಯಾವುದೇ ಸರ್ಕಾರ ಮಾಡಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!