Mumbai

ಆತ್ಮಹತ್ಯೆ ಪ್ರಕರಣ : ಅರ್ನಬ್ ಗೋಸ್ವಾಮಿ ವಿಚಾರಣೆ

ಮುಂಬೈ, ನ 04 – ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿ, ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯವರನ್ನು ವಿಚಾರಣೆಗಾಗಿ ವರ್ಲಿ ನಿವಾಸದಿಂದ ಪೊಲೀಸ್ ಜೀಪಿನಲ್ಲಿ ರಾಯಗಡ ಜಿಲ್ಲೆಗೆ ಕರೆದೊಯ್ಯಲಾಗಿದೆ.

ಇಂಟೀರಿಯರ್ ಡಿಸೈನರ್ ಅನ್ವಯ ನಾಯಕ 2018 ರಲ್ಲಿ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ೯ಬ ಗೋಸ್ವಾಮಿ ಸೇರಿದಂತೆ ಮೂವರು ವ್ಯಕ್ತಿಗಳ ವಿರುದ್ಧ ರಾಯಗಡ ಪೊಲೀಸರು ಈ ಹಿಂದೆ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದರು.

ಅನ್ವಯ ನಾಯಕ ಅಲಿಬಾಗ್‌ನ ತನ್ನ ಬಂಗಲೆಯಲ್ಲಿ ನೇಣಿಗೆ ಶರಣಾಗಿದ್ದರು ಅವರ ತಾಯಿ ಕುಮುದ ಅವರ ದೇಹವೂ ಅಲ್ಲಿ ಪತ್ತೆಯಾಗಿತ್ತು. ಕುಮುದ ಅವರ ಸಾವು ಹೇಗಾಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ನಾಯಕ ಬರೆದಿಟ್ಟಿದ್ದ ಡೆತ್ ನೋಟ್ ಆಧಾರದ ಮೇಲೆ ಗೋಸ್ವಾಮಿ ವಿರುದ್ಧ ಆತ್ಮಹತ್ಯೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!