Belagavi

ಕಾರ್ ಗ್ಲಾಸ್ ಒಡೆದು 35 ತೊಲೆ ಬಂಗಾರ ದೋಚಿದ ಕಳ್ಳರು

ಬೆಳಗಾವಿ, ೪- ಸಂಕೇಶ್ವರ ಪಟ್ಟಣದ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ಸೇರಿದ ಕಾರ್ ನಲ್ಲಿಟ್ಟಿದ್ದ 35 ತೊಲೆ ಬಂಗಾರದ ಆಭರಣಗಳನ್ನು ಕಳ್ಳರು ದೋಚಿದ ಪ್ರಕರಣ ನಿನ್ನೆ ರಾತ್ರಿ ಬೆಳಗಾವಿಯ ಶಹಾಪುರನಲ್ಲಿ ಸಂಭವಿಸಿದೆ.

ಸಂಕೇಶ್ವರದ ಸಂತೋಷ ಮಗದುಮ ಎಂಬ ಚಿನ್ನದ ವ್ಯಾಪಾರಿ ಬೆಳಗಾವಿಯ ಶಹಾಪುರನ ಚಿನ್ನದ ವ್ಯಾಪಾರಿಯೊಬ್ಬರಿಂದ ಚಿನ್ನದ ಆಭರಣಗಳನ್ನು ಖರೀದಿಸಿ ಸಂಕೇಶ್ವರಗೆ ತೆಗೆದುಕೊಂಡು ಹೋಗುತ್ತಿದ್ದರು. ಶಹಾಪುರದಲ್ಲಿ ಬೇರೆ ಏನೋ ಖರೀದಿಸಲು ಕಾರ್ ರಸ್ತೆ ಬದಿ ನಿಲ್ಲಿಸಿ ಹೊರಗೆ ಹೋದಾಗ ಖದೀಮರು ಕಾರಿನ ಕಿಟಕಿಯ ಗಾಜು ಒಡೆದು ಚಿನ್ನ ಲಪಟಾಯಿಸಿದ್ದಾರೆ.

ಮಗದುಮ ಅವರು ಕಳ್ಳತನದ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಿನ್ನದ ವ್ಯಾಪಾರದ ಪರಿಚಯವಿದ್ದವರೇ ಈ ಕೃತ್ಯ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದು ತನಿಖೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!