Kalaburagi

ತಲೆಯ ಮೇಲೆ ಕಲ್ಲು ಹಾಕಿ ಅತ್ತೆಯ ಕೊಲೆ

ಕಲಬುರಗಿ, ನ.4- ಅಳಿಯನೇ ತನ್ನ ಅತ್ತೆಯನ್ನು‌ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ‌ಭಿಮನಾಳ‌ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಲಕ್ಷ್ಮಿಬಾಯಿ‌ ಕೊಲೆಯಾದಾಕೆ.

ತಲೆಯ‌‌ ಮೇಲೆ‌ ಕಲ್ಲು ಎತ್ತಿ‌ ಹಾಕಿ ಅಳಿಯ ಕೊಲೆ‌ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅತ್ತೆ ಲಕ್ಷ್ಮಿಬಾಯಿ ಭಾಲ್ಕಿ ತಾಲ್ಲೂಕಿನಿಂದ ಭಿಮನಾಳ ಗ್ರಾಮಕ್ಕೆ ತನ್ನ ಮಗಳನ್ನು ಅಳಿಯನ ಮನೆಗೆ ಬಿಡಲು ಬಂದಿದ್ದಳು. ಈ ವೇಳೆ ಮಗಳ ವಿಚಾರಕ್ಕೆ ಅತ್ತೆ, ಅಳಿಯನ ಮಧ್ಯೆ ಗಲಾಟೆಯಾಗಿದೆ. ಬಳಿಕ ಅಳಿಯ ಅತ್ತೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!