Dharwad

ನವಲಗುಂದ, ಅಳ್ನಾವರ ಚುನಾವಣೆ: ನಿಗೂಢÀ ರಹಸ್ಯವಾಗಿರುವ ಪಕ್ಷಗಳ ಮೈತ್ರಿ ಕಸರತ್ತು

ಧಾರವಾಡ, ನ.3- ನವಲಗುಂದ ಪುರಸಭೆ ಮತ್ತು ಅಳ್ನಾವರ ಪ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು ಯಾವ ಪಕ್ಷಕ್ಕೂ ಬಹುಮತ ಇರದಿರುವ ಹಿನ್ನೆಲೆಯಲ್ಲಿ ಯಾವ ಪಕ್ಷದೊಂದಿಗೆ ಮೈತ್ರಿ ಎಂಬುದು ನಿಗೂಢವಾಗಿದೆ.

ಎರಡೂ ಕಡೆ ಕಾಂಗ್ರೆಸ್‍ಗೆ ಜೆಡಿಎಸ್ ಪ್ರಮುಖ ವಿರೋಧಿಯಾಗಿದೆ. ಹಾಗಾಗಿ ಅನೇಕ ಸದಸ್ಯರು ಬಿಜೆಪಿ ಜೊತೆ ಸಖ್ಯಕ್ಕೆ ಓಕೆ ಎನ್ನುವಂತಿದ್ದರೂ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸದಂತೆ ಕಾಂಗ್ರೆಸ್ ವರಿಷ್ಠರು ಸ್ಪಷ್ಟ ನಿರ್ದೇಶನ ನೀಡಿರುವುದರಿಂದ ಮತ್ತಷ್ಟು ಗೋಜಲಾಗಿದೆ.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ ಕುಮಾರ ಪಾಟೀಲ ಎರಡು ಕಡೆ ಬ್ಲಾಕ್ ಅಧ್ಯಕ್ಷರು, ಸದಸ್ಯರು ಮುಂತಾದವರ ಚರ್ಚೆ ನಡೆಸಿದ್ದು ಜೆಡಿಎಸ್ ಜತೆ ಹೊಂದಾಣಿಕೆಯಾಗದಿದ್ದಲ್ಲಿ ವಿಪಕ್ಷದಲ್ಲಿ ಕೂಡ್ರುವದಾಗಿ ಹೇಳಿದ್ದಾರೆ.

ನವಲಗುಂದಲ್ಲಿ ಜೆಡಿಎಸ್ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದರೆ ಅಳ್ನಾವರದಲ್ಲಿ ಪಕ್ಷೇತರರೊಬ್ಬರ ಸೇರಿ 9 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‍ಗೆ ಒಂದು ಸ್ಥಾನದ ಕೊರತೆ ಕಾಣುತ್ತಿದೆ.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಹೊಂದಾಣಿಕೆಗಾಗಿ ಹರಸಾಹಸ ಮಾಡುತ್ತಿದೆ. ನವಲಗುಂದದಲ್ಲಿ ಬಿಜೆಪಿ ಕಾಂಗ್ರೆಸ್‍ಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡನ್ನೂ ಬಿಟ್ಟುಕೊಡಲು ಸಿದ್ದವಾಗಿದೆ ಎನ್ನಲಾಗುತ್ತಿದೆ. ಆದರೆ ಈ ವಿಷಯ ವರಿಷ್ಠರ ಅಂಗಳಕ್ಕೆ ಮುಟ್ಟಿರುವುದು ಸಮಸ್ಯೆಯಾಗಿದೆ. ಇಲ್ಲದಿದ್ದರೆ ಈ ಹಿಂದಿನಂತೆ ಇಲ್ಲಿ ಸ್ಥಳೀಯ ಮಟ್ಟದಲ್ಲಿ ಅಭಿವೃದ್ದಿ ಮೈತ್ರಿಯ ಎಲ್ಲ ಸಾಧ್ಯತೆಗಳಿದ್ದವು.

ಬಿಜೆಪಿಯ ನಾಲ್ವರು ಸದಸ್ಯರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿ ಕೊಳ್ಳುವ ಮಾತುಕತೆ ನಡೆಸುತ್ತಿದ್ದಾರೆಂದು ಹೇಳುತ್ತಿದ್ದರೂ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ನಾವು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರಲ್ಲದೇ ಇಬ್ಬರ ನಡುವೆ ಮಾತುಕತೆ ಹಂತದಲ್ಲಿದೆ. ಈಗಲೇ ಏನನ್ನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಅಳ್ನಾವರದಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಶಾಸಕರು ಮತ್ತು ಸಂಸದರು ಮತ ಹಾಕುವ ಸನ್ನಿವೇಶವೂ ನಿರ್ಮಾಣವಾಗಿದೆ. ಯಾವುದೇ ಹೊಂದಾಣಿಕೆ ಸ್ಪಷ್ಟತೆ ಇಲ್ಲವಾಗಿದ್ದು ಅಂತಿಮವಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಬಹುದು ಎನ್ನಲಾಗುತ್ತಿದೆ.

ಅಂತಿಮವಾಗಿ ಉಭಯ ಪಕ್ಷಗಳ ಸದಸ್ಯರು ಮಾಜಿ ಸಚಿವ ಕೆ.ಎನ್.ಗಡ್ಡಿ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಗಂಗಾಧರ ಮಠ ಅವರಿಗೆ ಹಿರಿತನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆನ್ನಲಾಗಿದೆ.

ಈ ಬೆಳವಣಿಗೆಯಿಂದಾಗಿ ಬಿಜೆಪಿ ಸದಸ್ಯರಲ್ಲಿ ಗೊಂದಲ ಉಂಟಾಗಿದ್ದು, ಪಕ್ಷದ ಮುಖಂಡರ ಮಾತು ಕೇಳಿದರೆ ಅಧಿಕಾರದಿಂದ ವಂಚಿತರಾಗುವ ಆತಂಕ ಎದುರಾಗಿದೆ.

ಬಾಕ್ಸ
ಕೋಮುವಾದಿ ಬಿಜೆಪಿ ಜತೆಗೆ ಎರಡು ಕಡೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವುದಿಲ.್ಲ ಮೈತ್ರಿಯಾದಲ್ಲಿ ಜೆಡಿಎಸ್ ಜತೆ ಮಾತ್ರ. ಇಲ್ಲವಾದಲ್ಲಿ ವಿಪಕ್ಷದಲ್ಲಿ ಕೂಡ್ರುತ್ತೇವೆ. -ಅನಿಲ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!