Dharwad

ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ, 1.34 ಲಕ್ಷರೂ. ನಗದು ಜಪ್ತಿ

ಧಾರವಾಡ, ನ.3- ಹುಬ್ಬಳ್ಳಿಯ ಕೇಶ್ವಾಪುರ ಪ್ರದೇಶದ ಜನತಾ ಕಾಲನಿ ಸರ್ಕಲ್‍ನ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನು ಕೇಶ್ವಾಪೂರ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಇಲ್ಲಿನ ಆರ್.ಸಿ.ಕಾಲನಿ ನಿವಾಸಿಗಳಾದ ಶಿವರಾಮಕೃಷ್ಣ ನಾಚರಯ್ಯ(35), ಗಾಂಧಿವಾಡದ ರಾಜೇಂದ್ರ ಪ್ರಭುದಾಸ ಅಕ್ಕಿದಾಸರಿ(35) ಹಾಗೂ ಚಾಲುಕ್ಯ ನಗರದ ರಾಜರಾವ್ ಜೋಸೇಫ್ ಪಾಪತಿನಿ(47) ಬಂಧಿತರಾಗಿದ್ದಾರೆ.

ಆರೋಪಿತರು ಆರ್‍ಸಿಬಿ ಮತ್ತು ಡೆಲ್ಲಿ ನಡುವಿನ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿರುವಾಗ ಇನ್ಸಪೆಕ್ಟರ್ ಸುರೇಶ ಕುಂಬಾರ ನೇತ್ರತ್ವದಲ್ಲಿ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದು, ಅವರಿಂದ 1.34ಲಕ್ಷ ರೂ. ನಗದು ಹಾಗೂ ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಸಿಬ್ಬಂದಿಗಳಾದ ಗುಳೇಶ ಹುಡೇದ,ಮೃತ್ಯುಂಜಯ ಕಾಲವಾಡ,ರವಿರಾಜ, ಅಮೃತ ಮಚ್ಚೇದ ಹಾಗೂ ರಾಠೋಡ ಮುಂತಾದವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!