Dharwad

ಹುಬ್ಬಳ್ಳಿಯಲ್ಲಿ ಚೂರಿ ಇರಿತ: ಇಬ್ಬರ ಬಂಧನ

ಧಾರವಾಡ, ನ.3- ಕಳೆದ ಒಂದೇ ರಾತ್ರಿಯಲ್ಲಿ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯ ಎರಡು ಕಡೆ ಪ್ರತ್ಯೇಕ ಇರಿತದ ಪ್ರಕರಣ ಸಂಭವಿಸಿದ್ದು ಈ ಘಟನೆಗಳಿಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಹಳೇಹುಬ್ಬಳ್ಳಿಯ ಪೆÇಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರದಲ್ಲಿ ಶೋಯಬ್ ಅಬ್ಬನ್ನವರ ಎಂಬ ಯುವಕ ಇರಿತಕ್ಕೆ ಒಳಗಾಗಿದ್ದು ತೀವ್ರ ರಕ್ತಸ್ರಾವವಾಗಿ ಕಿಮ್ಸಗೆ ದಾಖಲು ಮಾಡಲಾಗಿದೆ.

ಗಾಯಾಳುವುನಿಂದ ಮಾಹಿತಿ ಪಡೆದು ಪೆÇಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿ ಸಾಗರ ಲಕ್ಕುಂಡಿ ಎಂಬಾತನನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಟಿಪ್ಪು ನಗರದಲ್ಲಿ ಈ ಘಟನೆ ಕೆಲಕಾಲ ಗೊಂದಲವನ್ನ ಸೃಷ್ಟಿಸಿತ್ತು.

ಬೈಕ್‍ನ್ನು ಸಾವಕಾಶವಾಗಿ ಹೊಡಿ ಎಂದು ಸಾಗರ ಹೇಳಿದ್ದಕ್ಕೆ ಶೋಯಬ್ ಏನಾಯಿತು ಎಂದಾಗ ಮಾತುಕತೆ ಬೆಳೆದಾಗ ಲಕ್ಕುಂಡಿ ಚಾಕುವಿನಿಂದ ಇರಿದಿದ್ದಾನೆ. ಈ ಹಿಂದೆ ಕೂಡ ಇವರ ಮಧ್ಯೆ ಜಗಳವಾಗಿತ್ತೆನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಗರನನ್ನು ಬಂಧಿಸಿದ್ದು ತನಖೆ ನಡೆದಿದೆ ಎಂದು ದಕ್ಷಿಣ ಎಸಿಪಿ ಎಂ.ವಿ.ಮಲ್ಲಾಪುರ ಹೇಳಿದ್ದಾರೆ.

ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಮಾಧವ ಪುರದಲ್ಲಿ ರಮೇಶ ಕಟ್ಟಿಮನಿ ಎಂಬ ಯುವಕನಿಗೆ ಪಕ್ಕಡಿ ಮತ್ತು ಎದೆ ಭಾಗದಲ್ಲಿ ಚಾಕು ಇರಿಯಲಾಗಿತ್ತು.ಈ ಸಂಬಂಧದಲ್ಲಿ ಮಂಜುನಾಥ ನರಗುಂದ ಹಾಗೂ ವಿನಾಯಕ ನರಗುಂದ ಆರೋಪಿಗಳಾಗಿದ್ದು ವಿನಾಯಕನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ನೀರಿನ ವಿಷಯಕ್ಕೆ ರಮೇಶ ಹಾಗೂ ನರಗುಂದ ಇವರ ಮಧ್ಯೆ ಮನಸ್ತಾಪವಿದ್ದು ನಿನ್ನೆ ಚಾಕುವಿನಿಂದ ಇರಿಯಲಾಗಿತ್ತು.ತಕ್ಷಣ ಕಾರ್ಯಪ್ರವ್ರತ್ತರಾದ ಅಶೋಕನಗರ ಪೊಲೀಸರು ವಿನಾಯಕನನ್ನು ಬಂಧಿಸಿದ್ದಾರೆ.ಗಾಯಾಳು ಕಟ್ಟಿಮನಿ ಸಹ ಚೇತರಿಸಿಕೊಂಡಿದ್ದಾನೆಂದು ಉತ್ತರ ಎಸಿಪಿ ಶಂಕರ ರಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!