Abu Dhabi

ಕೊರೋನಾ ಲಸಿಕೆ ಹಾಕಿಸಿಕೊಂಡ ಯುಎಇ ಪ್ರಧಾನಿ

ಅಬುಧಾಬಿ, ನ 3- ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರಧಾನಿ ಶೇಖ್ ಮೊಹಮ್ಮದ ಬಿನ್ ರಶೀದ ಅಲ್ ಮಕ್ತೌಮ್ ಮಂಗಳವಾರ ಕೊರೋನಾ ವಿರುದ್ಧ ಲಸಿಕೆ ಹಾಕಿಸಿಕೊಂಡಿದ್ದಾರೆ.

ಲಸಿಕೆ ಹಾಕಿಸಿಕೊಳ್ಳುತ್ತಿರುವ ಛಾಯಾಚಿತ್ರವನ್ನು ಟ್ವಿಟರ್ ಮೂಲಕ ಅವರು ಹಂಚಿಕೊಂಡಿದ್ದಾರೆ. ಈ ಕುರಿತು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ತಾನು ಇಂದು ಲಸಿಕೆ ಹಾಕಿಸಿಕೊಂಡಿದ್ದೇನೆ. ಪ್ರತಿಯೊಬ್ಬರೂ ಆರೋಗ್ಯವಾಗಿ, ಸುರಕ್ಷಿತವಾಗಿರಲು ಕೋರಿಕೊಳ್ಳುತ್ತೇನೆ. ಯುಎಇ ನಲ್ಲಿ ಲಸಿಕೆ ಲಭ್ಯವಾಗಲು ಹಗಲು ರಾತ್ರಿ ಶ್ರಮಿಸಿದ ವೈದ್ಯಕೀಯ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ. ಇನ್ನು ಮುಂದೆ ಯುಎಇಯಲ್ಲಿ ಒಳ್ಳೆಯ ದಿನಗಳು ಬರಲಿವೆ ” ಅವರು ಟ್ವಿಟ್ಟರ್ ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ, ಯುಎಇನ ಹಲವು ಸಚಿವರು ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೊರೋನಾ ರೋಗಿಗಳೊಂದಿಗೆ ಸಂಪರ್ಕದಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ತುರ್ತು ಸಮಯದಲ್ಲಿ ಕೊರೊನಾ ಲಸಿಕೆ ನೀಡಲು ಯುಎಇ ಆಡಳಿತ ಅವಕಾಶ ಕಲ್ಪಿಸಿದೆ. ಲಸಿಕೆ ಪರವಾನಗಿಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

Leave a Reply

Your email address will not be published. Required fields are marked *

Back to top button
error: Content is protected !!