Sports

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶೇನ್‌ ವಾಟ್ಸನ್‌ ವಿದಾಯ

ದುಬೈ, ನ 3- ಆಸ್ಟ್ರೇಲಿಯಾ ತಂಡದ ಮಾಜಿ ಆಲ್‌ರೌಂಡರ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಶೇನ್‌ ವಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

2020ರ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹೀನಾಯ ಪ್ರದರ್ಶನದೊಂದಿಗೆ ಗುಂಪು ಹಂತದಲ್ಲಿಯೇ ಹೊರ ನಡೆಯಿತು. ಇದರಿಂದ ಸಾಕಷ್ಟಯ ಟೀಕೆಗೆ ತಂಡ ಒಳಗಾಯಿತು. ಇದರ ನಡುವೆ ಶೇನ್‌ವಾಟ್ಸನ್‌ ಕೂಡ ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ ಟೀಕಿಗೆ ಗುರಿಯಾಗಿದ್ದರು.

ಐಪಿಎಲ್ 2020 ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದ 39 ವರ್ಷದ ಅನುಭವಿ ಬಲಗೈ ದಾಂಡಿಗ ವಾಟ್ಸನ್‌, 29.00ರ ಸರಾಸರಿಯಲ್ಲಿ 299 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತರಾದರು.

ಅಂದಹಾಗೆ ವಾಟ್ಸನ್‌ ಈಗಾಗಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತು ಬಿಗ್‌ ಬ್ಯಾಷ್‌ ಲೀಗ್‌ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿಯಾಗಿದ್ದು, ಐಪಿಎಲ್‌ನಲ್ಲಿ ಮಾತ್ರವೇ ಆಟ ಮುಂದುವರಿಸಿದ್ದರು. ಇನ್ನು ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತನ್ನ 14ನೇ ರೌಂಡ್‌ ರಾಬಿನ್‌ ಕದನದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿ ಐಪಿಎಲ್‌ 2020 ಟೂರ್ನಿಗೆ ಗುಡ್‌ ಬೈ ಹೇಳಿತು. ಈ ಸಂದರ್ಭದಲ್ಲಿ ವಾಟ್ಸನ್ ಇದೇ ತಮ್ಮ ಕೊನೆಯ ಐಪಿಎಲ್‌ ಎಂದು ಹೇಳಿಕೊಂಡಿದ್ದ. ಇದೀಗ ಟ್ವೀಟ್‌ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.

“ಸಿಎಸ್‌ಕೆ ತಂಡದ ಕೊನೆಯ ಪಂದ್ಯದ ಬಳಿಕ ವಾಟ್ಸನ್‌ ತಾವು ನಿವೃತ್ತಿ ಹೊಂದುತ್ತಿರುವ ವಿಚಾರ ತಿಳಿಸಿ ಭಾವುಕರಾದರು. ಸೂಪರ್‌ ಕಿಂಗ್ಸ್‌ ಪರ ಆಡಿದ್ದು ತಮಗೆ ಸಿಕ್ಕ ಬಹುದೊಡ್ಡ ಗೌರವ ಎಂದು ಹೇಳಿಕೊಂಡರು,” ಎಂದು ಪಂದ್ಯದ ಬಳಿಕ ಸಿಎಸ್‌ಕೆ ಮೂಲಗಳು ಹೇಳಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

2018ರ ಸಾಲಿನಲ್ಲಿ ಸೂಪರ್‌ ಕಿಂಗ್ಸ್ ತಂಡ ಸೇರಿದ ವಾಟ್ಸನ್‌, ಅದೇ ವರ್ಷ ತಂಡ ಚಾಂಪಿಯನ್ಸ್‌ ಪಟ್ಟ ಅಲಂಕರಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 2018ರ ಫೈನಲ್‌ನಲ್ಲಿ ಶತಕ ಬಾರಿಸಿದ ವಾಟ್ಸನ್ ತಂಡಕ್ಕೆ 3ನೇ ಕಿರೀಟ ಕೊಡಿಸಿದ್ದರು. ಬಳಿಕ 2019ರ ಫೈನಲ್‌ನಲ್ಲೂ ಮುಂಬೈ ಇಂಡಿಯನ್ಸ್‌ ಎದುರು 80 ರನ್‌ ಸಿಡಿಸಿ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು. ಆದರೆ ಸಿಎಸ್‌ಕೆ 1 ರನ್ ಅಂತರದಲ್ಲಿ ವೀರೋಚಿತ ಸೋಲುಂಡಿತ್ತು.

ಐಪಿಎಲ್‌ ಇತಿಹಾಸದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ವಾಟ್ಸನ್‌, ಆಡಿದ 145 ಪಂದ್ಯಗಳಿಂದ 3874 ರನ್‌ ಮತ್ತು 92 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಅಷ್ಟೇ ಅಲ್ಲದೆ ರಾಜಸ್ಥಾನ್‌ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ಪರ ಆಡಿದ ನಂತರ ಸಿಎಸ್‌ಕೆ ಬಳಗ ಸೇರಿದ್ದರು. 2008ರ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪ್ರಶಸ್ತಿ ಗೆದ್ದಾಗ ವಾಟ್ಸನ್ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!