Bengaluru

ನಟಿ ಸಂಜನಾ ನಿವಾಸದ ಮೇಲೆ ದಾಳಿ; ಮೊಬೈಲ್ ಫೋನ್, ಲ್ಯಾಪ್ ಟಾಪ್ ವಶ

ಬೆಂಗಳೂರು, ನ.3- ಡ್ರಗ್ಸ್ ಪ್ರಕರಣ ಆರೋಪಿಗಳಾದ ರಾಹುಲ್ ಮತ್ತು ಪೃಥ್ವಿ ಶೆಟ್ಟಿ ನೀಡಿದ ಮಾಹಿತಿ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ದಾಳಿ‌ ನಡೆಸಿದ ಸಿಸಿಬಿ ಸಂಜನಾ ಬಳಸುತ್ತಿದ್ದ ಮೂರು ಮೊಬೈಲ್ ಫೋನ್ , ಲ್ಯಾಪ್ ಟಾಪ್ ವಶಕ್ಕೆ ಪಡೆದಿದೆ.

ವಶದಲ್ಲಿರುವ ಸಂಜನಾಳನ್ನು ಸಿಸಿಬಿ ಹೆಚ್ಚಿನ ವಿಚಾರಣೆ ನಡೆಸಿ ನ.8ರಂದು ಬಂಧಿಸಿತ್ತು. ಬಳಿಕ ಸಂಜನಾ ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಗಿತ್ತು. ಎರಡು ಬಾರಿ ಪೊಲೀಸ್ ಕಸ್ಟಡಿಗೆ ಸಂಜನಾಳನ್ನ ನೀಡಿ ನ್ಯಾಯಾಲಯ ಅದೇಶ ಮಾಡಿತ್ತು. ಎಂಟು ದಿನ ಪೊಲೀಸ್ ಕಸ್ಟಡಿ ಮುಗಿದ ನಂತರ ಸೆಪ್ಟಂಬರ್ 16 ರಂದು ಸಂಜನಾ ಜೈಲು ಸೇರಿದ್ದಳು. ಸೆಪ್ಟೆಂಬರ್ ಹದಿನಾರರಿಂದ ಇಲ್ಲಿಯವರೆಗೆ ಪರಪ್ಪನ ಅಗ್ರಹಾರದಲ್ಲಿ ನಟಿ ಸಂಜನಾ ಇದ್ದಾರೆ.

ಇನ್ನೋರ್ವ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ನ.4ರಂದು ವಶಕ್ಕೆ‌ ಪಡೆದಿದ್ದರು‌‌. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ 4 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದರು. ಸೆ.7 ರಂದು ರಾಗಿಣಿ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಳ್ಳಲಿದ್ದು ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮತ್ತೆ ಐದು ದಿನಗಳ ಕಾಲ ವಶಕ್ಕೆ ಪಡೆದಿದ್ದರು. ಸೆ. 14 ರಂದು ರಾಗಿಣಿಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಅದೇಶ ನೀಡಿದ್ದು ಈ ದಿನದ ವರೆಗೆ ರಾಗಿಣಿ ಜೈಲಿನಲ್ಲಿ ಇದ್ದಾಳೆ‌.

Related Articles

Leave a Reply

Your email address will not be published. Required fields are marked *

Back to top button
error: Content is protected !!