New Delhi

ದೇಶಾದ್ಯಂತ 38,310 ಹೊಸ ಕೋವಿಡ್ ಪ್ರಕರಣ

ನವದೆಹಲಿ, ನ 03 (ಯುಎನ್ಐ) ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ 38,310 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 82,67,623 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ನವೀಕೃತ ಅಂಕಿಅಂಶದಲ್ಲಿ ತಿಳಿಸಿದೆ.

ಹಲವು ದಿನಗಳ ನಂತರ ಹೊಸ ಪ್ರಕರಣಗಳ ಒಂದೇ ದಿನದ ದಾಖಲಾತಿ ಸಂಖ್ಯೆಯು 40 ಸಾವಿರಕ್ಕಿಂತ ಕಡಿಮೆಯಾಗಿದೆ.

ಕಳೆದ ಒಂದು ದಿನದಲ್ಲಿ ಸಾಂಕ್ರಾಮಿಕ ವೈರಸ್‌ನಿಂದ 490 ಕ್ಕೂ ಹೆಚ್ಚು ಜೀವಗಳು ಬಲಿಯಾದ ನಂತರ ಮೃತರ ಸಂಖ್ಯೆ ಪ್ರಸ್ತುತ 1,23,097 ಕ್ಕೆ ಏರಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಏತನ್ಮಧ್ಯೆ, ಸೋಮವಾರದಿಂದ 58,323 ಆಸ್ಪತ್ರೆಗಳಿಂದ ಬಿಡುಗಡೆಯಾದ/ ಗುಣಪಡಿಸಿದ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಎಣಿಕೆ 76,03,121 ಕ್ಕೆ ತಲುಪಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದೇ ದಿನದಲ್ಲಿ 20,503 ರಷ್ಟು ಕಡಿಮೆಯಾಗುವ ಮೂಲಕ ಒಟ್ಟು 5,41,405 ಸಕ್ರಿಯ ಪ್ರಕರಣಗಳಿವೆ.

ಭಾರತೀಯ ಸಂಶೋಧನಾ ಆಯೋಗದ (ಐಸಿಎಂಆರ್) ಪ್ರಕಾರ, ಸೋಮವಾರದವರೆಗೆ 10,46,247 ಮಾದರಿಗಳನ್ನು ಕೋವಿಡ್ ಪತ್ತೆಗಾಗಿ ಪರೀಕ್ಷಿಸಲಾಗಿದ್ದು, ಇಲ್ಲಿಯವರೆಗೆ, ಒಟ್ಟು 11,17,89,350 ಸಂಚಿತ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಶೇಕಡಾವಾರು ಪ್ರಮಾಣದಲ್ಲಿ, ಸಕ್ರಿಯ ಪ್ರಕರಣಗಳು ಈಗ ಶೇಕಡಾ 6.55, ಬಿಡುಗಡೆಯಾದ ಪ್ರಕರಣಗಳು ಶೇಕಡಾ 91.96 ಮತ್ತು ಕೋವಿಡ್‌ನಿಂದ ಈವರೆಗೆ ಸಂಭವಿಸಿದ ಸಾವುಗಳು ಶೇಕಡಾ 1.49 ರಷ್ಟಿದೆ.

ಯುಎನ್‍ಐ ಎಸ್‍ಎ 1147

Related Articles

Leave a Reply

Your email address will not be published. Required fields are marked *

Back to top button
error: Content is protected !!