Uncategorized

ಅಮಿತಾಬ ಬಚ್ಚನ್ ಕ್ಷಮಾಯಾಚನೆಗೆ ಹಿಂದೂ ಜನ ಜಾಗರಣ ಸಮಿತಿ ಆಗ್ರಹ

ಕೋಲ್ಹಾಪುರ, ನ 02 – ಸೋನಿ ಟಿವಿಯಲ್ಲಿ ಪ್ರಸಾರವಾದ “ಕೌನ್ ಬನೇಗಾ ಕರೋಡ್ ಪತಿ -ಸೀಸನ್ 12” (ಕೆಬಿಸಿ) ಯ ಅಕ್ಟೋಬರ್ 30 ರ ಸಂಚಿಕೆಯಲ್ಲಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ಹಿಂದೂ ಜನ ಜಾಗರಣ ಸಮಿತಿಯು (ಎಚ್‌ಜೆಎಸ್) ಖ್ಯಾತ ಹಿಂದಿ ನಟ ಅಮಿತಾಬ ಬಚ್ಚನ್ ಅವರ ಕ್ಷಮಾಯಾಚನೆಗೆ ಆಗ್ರಹಿಸಿದೆ.

ಹಿಂದೂ ಧರ್ಮಗ್ರಂಥಗಳ ಬಗ್ಗೆ ಅನುಮಾನಾಸ್ಪದ ಮತ್ತು ನಕಾರಾತ್ಮಕ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಎಚ್‍ ಜೆಎಸ್‍ ಈ ಒತ್ತಡ ಹೇರಿದೆ.

ಅಕ್ಟೋಬರ್ 30 ರಂದು ಕೆಬಿಸಿಯ “ಕರ್ಮವೀರ ವಿಶೇಷ” ಸಂಚಿಕೆಯಲ್ಲಿ ಹಿಂದೂ ಧರ್ಮಗ್ರಂಥಗಳ ಬಗ್ಗೆ ಅನುಮಾನಾಸ್ಪದ ಮತ್ತು ನಕಾರಾತ್ಮಕ ಪ್ರಶ್ನೆಗಳನ್ನು ಕೇಳುವ ಮೂಲಕ ಹಿಂದೂಗಳ ತಂದೆಯ ಸ್ಥಾನಗಳನ್ನು ಮತ್ತೊಮ್ಮೆ ಅವಮಾನಿಸಲಾಗಿದೆ ಎಂದು ಎಚ್‌ಜೆಎಸ್ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಾ. ಬಾಬಾ ಸಾಹೇಬ ಅಂಬೇಡ್ಕರ ಮತ್ತು ಅವರ ಅನುಯಾಯಿಗಳು 1927 ರ ಡಿಸೆಂಬರ್ 25 ರಂದು ಯಾವ ಹಿಂದೂ ಧರ್ಮಗ್ರಂಥಗಳನ್ನು ಸುಟ್ಟುಹಾಕಿದರು ಎಂಬ ಪ್ರಶ್ನೆಯನ್ನು ಬಚ್ಚನ್ ಕೇಳಿದ್ದರು. ಮತ್ತು ಉತ್ತರಗಳಿಗಾಗಿ ವಿಷ್ಣು ಪುರಾಣ, ಭಗವದ್ಗೀತೆ, ಋಗ್ವೇದ ಮತ್ತು ಮನುಸ್ಮೃತಿಯ ನಾಲ್ಕು ಆಯ್ಕೆಗಳನ್ನು ನೀಡಿದ್ದರು.

ಬಚ್ಚನ್ ಅವರು ಕೆಬಿಸಿಯಲ್ಲಿ ಈ ಪ್ರಶ್ನೆ ಕೇಳುವ ಮೂಲಕ ಯಾವ ಸಂದೇಶವನ್ನು ನೀಡಲು ಬಯಸಿದ್ದಾರೆ ಎಂದು ಶಿಂಧೆ ಪ್ರಶ್ನಿಸಿದ್ದಾರೆ. ಅವರು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮನುಸ್ಮೃತಿಯನ್ನು ಸೈದ್ಧಾಂತಿಕವಾಗಿ ಸೂಕ್ತವಲ್ಲದ ಜಾತಿ-ತಾರತಮ್ಯಕ್ಕಾಗಿ ಟೀಕಿಸುವ ಮೂಲಕ ಸಮಾಜವು ಅದನ್ನು ಸುಟ್ಟು ಹಾಕಿತು. ಕೆಬಿಸಿಯಲ್ಲಿ ಇದು ಎರಡನೇ ಘಟನೆಯಾಗಿದೆ. ಈ ಮೊದಲು ಛತ್ರಪತಿ ಶಿವಾಜಿ ಮಹಾರಾಜ ಅವರನ್ನು ‘ಶಿವಾಜಿ’ ಎಂದು ಏಕವಚನದಲ್ಲಿ ಸಂಬೋಧಿಸಿ ಅವಮಾನಿಸಿತ್ತು ಎಂದು ಹೇಳಿದ್ದಾರೆ.

ಹಿಂದೂ ಧರ್ಮ, ಧರ್ಮಗ್ರಂಥಗಳು ಮತ್ತು ಡಾ.ಅಂಬೇಡ್ಕರ ಅವರಂತಹ ರಾಷ್ಟ್ರೀಯ ವೀರರನ್ನು ಅವಮಾನಿಸಿದ್ದಕ್ಕಾಗಿ ಅಮಿತಾಬ ಬಚ್ಚನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!