Sports

ಪ್ಲೇಆಫ್ಸ್‌ಗೆ ಅರ್ಹತೆ ಪಡೆಯದೇ ಇದ್ದ ಬಗ್ಗೆ ನೋವಾಗುತ್ತಿದೆ: ಕೆ.ಎಲ್‌ ರಾಹುಲ್‌

ಅಬುಧಾಬಿ, ನ 2 – ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿಲ್ಲವಲ್ಲ ಎಂಬ ಬೇಸರವಾಗುತ್ತಿದೆ ಆದರೆ ತಂಡದ ಪ್ರದರ್ಶನದಿಂದ ಹೆಮ್ಮೆಯಾಗುತ್ತಿದೆ ಎಂದು ಕಿಂಗ್ಸ್ ಇಲೆವೆನ್‌ ಪಂಜಾಬ್‌ ನಾಯಕ ಕೆ.ಎಲ್‌ ರಾಹುಲ್‌ ಹೆಳಿದರು.

ಇಲ್ಲಿನ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ನಿಗದಿತ 20 ಓವರ್‌ಗಳಿಗೆ 6ವಿಕೆಟ್‌ಗಳನ್ನು ಕಳೆದುಕೊಂಡು 153 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್ ಋತುರಾಜ‌ ಗಾಯಕ್ವಾಡ‌ (62*) ಅರ್ಧಶತಕದ ನೆರವಿನಿಂದ 9 ವಿಕೆಟ್‌ಗಳ ಜಯ ದಾಖಲಿಸಿತು.

ಒಟ್ಟು 14 ಪಂದ್ಯಗಳಲ್ಲಿ ಕೆ.ಎಲ್‌ ರಾಹುಲ್‌ ಬಳಗ 12 ಅಂಕಗಳನ್ನು ಕಲೆ ಹಾಕಿತು. ಚೆನ್ನೈ ಸೂಪರ್‌ ಕಿಂಗ್ಸ್ ಕೂಡ ಇಷ್ಟೇ ಅಂಕಗಳನ್ನು ಕಲೆ ಹಾಕಿದೆ. ಈ ಪಂದ್ಯದೊಂದಿಗೆ ಉಭಯ ತಂಡಗಳು 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಪಯಣವನ್ನು ಮುಗಿಸಿತು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್‌ ರಾಹುಲ್‌, “ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ತುಂಬಾ ಅವಕಾಶವಿತ್ತು, ಆದರೆ, ಪಡೆಯದೇ ಇದ್ದದ್ದು ತುಂಬಾ ನೋವು ತಂದಿದೆ. ಈ ಆವೃತ್ತಿಯಲ್ಲಿ ನಮ್ಮ ತಂಡದ ಪ್ರದರ್ಶನದ ಬಗ್ಗೆ ತುಂಬಾ ಹೆಮ್ಮೆ ಇದೆ. ಇನ್ನೊಂದು ಪಂದ್ಯ ಗೆದ್ದು ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದರೆ ತುಂಬಾ ಚೆನ್ನಾಗಿ ಇರುತ್ತಿತ್ತು. ಇದು ನೆನಪು ಮಾಡಿಕೊಂಡಾಗ ತುಂಬಾ ನೋವಾಗುತ್ತಿದೆ. ಇದರಿಂದ ನಾವು ಪಾಠ ಕಲಿತು, ಮುಂದಿನ ವರ್ಷ ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡಬೇಕು” ಎಂದು ಹೇಳಿದರು.

ಇದಕ್ಕೂ ಮುನ್ನ ಕಿಂಗ್ಸ್ ಇಲೆವೆನ್‌ ಪಂಜಾಬ್‌ 153 ರನ್‌ಗಳನ್ನು ಗಳಿಸುವಲ್ಲಿ ನೆರವಾಗಿದ್ದ ದೀಪಕ್‌ ಹೂಡಾ ಅಜೇಯ 61 ರನ್‌ಗಳನ್ನು ಗಳಿಸಿದ್ದರು. ದೀಪಕ್‌ ಕೊನೆಯ ಓವರ್‌ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ್ದರು. “ಇದು ಬ್ಯಾಟಿಂಗ್‌ ಮಾಡಲು ಉತ್ತಮ ವಿಕೆಟ್‌ ಆಗಿತ್ತು, ನಮಗೆ ಅತ್ಯುತ್ತಮ ಜತೆಯಾಟ ಬರಲಿಲ್ಲ. ಪವರ್‌ಪ್ಲೇನಲ್ಲಿ 50 ರನ್‌ಗಳ ಜತೆಯಾಟದ ಬಳಿಕ ಈ ಮೊತ್ತವನ್ನು ದೊಡ್ಡ ಮೊತ್ತವನ್ನಾಗಿ ಬದಲಾಯಿಸಲು ಸಾಧ್ಯವಾಗಲಿಲ್ಲ. 180 ರಿಂದ 190 ರನ್‌ಗಳನ್ನು ಭವಿಷ್ಯ ಉತ್ತಮ ಮೊತ್ತ. ದೀಪಕ್‌ ಹೂಡಾ ಚೆನ್ನಾಗಿ ಬ್ಯಾಟಿಂಗ್‌ ಮಾಡಿದರು. ಬ್ಯಾಟಿಂಗ್‌ ಕ್ರಮಾಂಕ ಸರಿಯಿಲ್ಲ ಎಂದು ಹೇಳುವುದಿಲ್ಲ, ಏಕೆಂದರೆ ಈ ಹಿಂದಿನ ಪಂದ್ಯಗಳಲ್ಲಿ ಇದೇ ಕ್ರಮಾಂಕದಲ್ಲಿ ದೊಡ್ಡ-ದೊಡ್ಡ ಮೊತ್ತಗಳನ್ನು ಕಲೆ ಹಾಕಿದ್ದೇವೆ,” ಎಂದರು.

“ಇದು ನಮಗೆ ತುಂಬಾ ಮುಖ್ಯವಾದ ಪಂದ್ಯವಾಗಿತ್ತು. ಒತ್ತಡವನ್ನು ನಾವು ಸರಿಯಾಗಿ ನಿಯಂತ್ರಿಸಲಿಲ್ಲ. ಸರಿಯಾದ ಜತೆಯಾಟಗಳು ನಮಗೆ ಸಿಗಲಿಲ್ಲ. ಅಗ್ರ ಕ್ರಮಾಂಕದಲ್ಲಿ ಒಂದು ಜೋಡಿಯಿಂದ 70 ರಿಂದ 80 ರನ್‌ಗಳನ್ನು ಕಲೆ ಹಾಕಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಸಾಧ್ಯವಾಗಲಿಲ್ಲ,” ಎಂದು ಹೇಳಿದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!