Belagavi

ಎಂಈಎಸ್ ಅನಧಿಕೃತ ಸಭೆಗೆ ನುಗ್ಗಲೆತ್ನಿಸಿದ ಕರವೇ ಕಾರ್ಯಕರ್ತರ ಬಂಧನ

ಬೆಳಗಾವಿ, ೧- ಸರ್ಕಾರದ ಅನುಮತಿ ನಿರಾಕರಿಸಿದ್ದರೂ ಬೆಳಗಾವಿ ಮರಾಠಾ ಮಂದಿರದಲ್ಲಿ ಅನಧಿಕೃತವಾಗಿ ಎಂಇಎಸ್ ನಡೆಸುತ್ತಿದ್ದ ಸಭೆಗೆ ನುಗ್ಗಲೆತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಿಗರಿಗೆ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದೇ ರಾಜ್ಯದ್ರೋಹಿಗಳಿಗೆ ಸಭೆ ನಡೆಸಲು ಅನುಮತಿಸಿದನ್ನು ಖಂಡಿಸಿ ಸಭೆ ತಡೆಯಲು ವಾಹನಗಳಲ್ಲಿ ತೆರಳುತ್ತಿದ್ದ ಕನ್ನಡ ಕಾರ್ಯಕರ್ತರನ್ನು ರೈಲ್ವೆ ಮೇಲ್ಸೇತುವೆ ಮೇಲೆ ಪೊಲೀಸರು ತಡೆದು ವಶಕ್ಕೆ ಪಡೆದರು.

ಸಭೆ ಕುರಿತ ಮಾಹಿತಿ ಪಡೆದ ಬೇರೆ ಕೆಲ ಕನ್ನಡ ಕಾರ್ಯಕರ್ತರು ಸಭೆಗೆ ನುಗ್ಗಲು ಕಾಲ್ನಡಿಗೆಯಲ್ಲಿ ಹೊರಟರು. ಸುದ್ದಿ ತಿಳಿಯುತ್ತಲೇ ಪೊಲೀಸರು, ಅವರನ್ನೂ ವಶಕ್ಕೆ ಪಡೆದು ನಾಡದ್ರೋಹಿಗಳಿಗೆ ಸಾಂಗವಾಗಿ ಸಭೆ ನಡೆಸಲು ಅನುವು ಮಾಡಿಕೊಟ್ಟರು.

ಕನ್ನಡಿಗರಿಗೆ ಪೊಲೀಸರು ಅನ್ಯಾಯ ಮಾಡುತ್ತಿದ್ದಾರೆ, ಎಂಇಎಸ್ ಸಭೆ ಅನಧಿಕೃತ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘೋಷಣೆ ಕೂಗಿದರು. ಆದರೆ ಸಂಘರ್ಷದ ವಾತಾವರಣ ತಪ್ಪಿಸಲು ಮುಂದಾದ ಪೊಲೀಸರು ಸಭೆ ನಡೆಯುತ್ತಿದ್ದ ಮರಾಠಾ ಮಂದಿರದ ಸ್ವಲ್ಪ ದೂರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮಹಾದೇವ ತಳವಾರ ನೇತೃತ್ವದ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!