Belagavi

ಎಂಇಎಸ್‍ ವಿರೋಧಿಸಿ ಉತ್ತೇಜಿಸಬೇಡಿ; ಜಾರಕಿಹೊಳಿ ಸಲಹೆ

ಬೆಳಗಾವಿ, ೧- ಮಹಾರಾಷ್ಟ್ರ ವಾದಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಸುನೀಗುತ್ತಿದೆ. ಉಸಿರಾಡುವದಕ್ಕೆ ಏದುಸಿರು ಬಿಡುತ್ತಿದೆ, ನೀವು ಅದನ್ನು ವಿರೋಧಿಸಿ ಚೇತರಿಸಿಕೊಳ್ಳಲು ಅಪರೋಕ್ಷವಾಗಿ ಸಹಾಯ ಮಾಡುತ್ತಿದ್ದೀರಿ, ಅದರಷ್ಟಕ್ಕೆ ಅದನ್ನು ಬಿಟ್ಟರೆ ಅದು ಸಾಯುತ್ತದೆ ಎಂಬರ್ಥದ ಮಾತುಗಳನ್ನು ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕನ್ನಡಿಗರಿಗೆ ಕಿವಿಮಾತು ಹೇಳಿದ್ದಾರೆ.

65 ನೆಯ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎಂಈಎಸ್ ನವರು ಯಾವುದೊ ಮೂಲೆಯಲ್ಲಿ ಕರಾಳ ದಿನ ಆಚರಿಸುತ್ತಾರೆ. ಅದಕ್ಕೆ ಯಾವುದೇ ರೀತಿ ಮಹತ್ವ ಕೊಡುವುದು ಬೇಡ. ಹೆಚ್ಚು ಮಹತ್ವ ಕೊಟ್ಟರೆ ಕಿಮ್ಮತ್ತು ಕೊಟ್ಟ ಹಾಗೇ ಆಗುತ್ತದೆ, ವಿರೋಧಿಸಿದರೆ ಅದು ಚೇತರಿಸಿಕೊಳ್ಳುತ್ತದೆ ಅದಕ್ಕೆ ಆಸ್ಪದ ಕೊಡಬೇಡಿಯೆಂದು ಅವರು ಹೇಳಿದರು.

ಮಹಾರಾಷ್ಟ್ರ ಸಚಿವರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರಾಳ ದಿನ ಆಚರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಕುರಿತೂ ಮಹತ್ವ ಕೊಡುವುದು ಬೇಡ. ತಮ್ಮ ರಾಜ್ಯದಲ್ಲಿ ಅವರು ಮಾಡುತ್ತಾರೆ, ನಮ್ಮ ರಾಜ್ಯದ್ದು ನಾವು ಮಾಡೋಣ. ನಮ್ಮ ರಾಜ್ಯದ ಹಿತ ಕಾಪಾಡುವ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆ ಇಲ್ಲ. ಅದೇ ರೀತಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಪಕ್ಷೇತರ ಶಾಸಕರಾಗಿದ್ದರು, ಅವರು ಈಗ ಎಂಇಎಸ್‍ನಲ್ಲಿ ಇಲ್ಲ. ಅವರನ್ನು ಶೀಘ್ರವೇ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ. ಬಿಜೆಪಿಗೆ ಸೇರುತ್ತಾರೆ ಎನ್ನುವ ಕಾರಣಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುತ್ತಿಲ್ಲ. ಅದು ಸಹಕಾರಿ ಸಂಸ್ಥೆ. ಅದು ಪಕ್ಷಾತೀತ, ಅಲ್ಲಿ ರಾಜಕೀಯವಿಲ್ಲ ಎಂದು ರಮೇಶ ಜಾರಕಿಹೊಳಿ ಸ್ಪಷ್ಪಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!