Belagavi

ಕರ್ನಾಟಕದ ದೌರ್ಜನ್ಯದಿಂದ ಎಂಇಎಸ್ ಗೆ ಮುಕ್ತಿ ಬೇಕಂತೆ

ಬೆಳಗಾವಿ, ೧- ತನ್ನದೇ ಜನರ ಬೆಂಬಲ ಕಳೆದುಕೊಂಡು, ಎಲ್ಲ ಚುನಾವಣೆಗಳಲ್ಲಿ ಸೋತು ನಶಿಸಿ ಹೋಗುವ ಹಂತಕ್ಕೆ ತಲುಪಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಮತ್ತೆ ಪುಟಿದೇಳಲು ಮಹಾರಾಷ್ಟ್ರದ ಸಹಾನುಭೂತಿ, ಬೆಂಬಲ ಬೇಡ, ಬದಲಾಗಿ ಇಲ್ಲಿನ ಮರಾಠಿಗರ ಮೇಲಾಗುತ್ತಿರುವ ಕರ್ನಾಟಕ ಸರಕಾರದ ದೌರ್ಜನ್ಯ ನಿಲ್ಲಿಸಿದರೆ ಸಾಕು, ಅದನ್ನು ಮಾಡಿಯೆಂದು ಮಹಾರಾಷ್ಟ್ರ ಸರಕಾರವನ್ನು ಅದು ಅಂಗಲಾಚಿ ಬೇಡಿಕೊಂಡಿದೆ.

ಕರ್ನಾಟಕ ರಾಜ್ಯೋತ್ಸವ ದಿನದ ನಿಮಿತ್ಯ ಇಲ್ಲಿನ ಮರಾಠಾ ಮಂದಿರದಲ್ಲಿ ಆಯೋಜಿಸಿದ್ದ “ಕರಾಳದಿನ” ದ ಸಭೆಯಲ್ಲಿ ಮಾತನಾಡಿದ ಕಿರಣ ದಳವಿ, “ರಾಜ್ಯಗಳ ಪುನಾರಚನೆಯಲ್ಲಿ ಅನೇಕ ಮರಾಠಿ ಭಾಷಿಕ ಪ್ರದೇಶಗಳನ್ಮು ಕರ್ನಾಟಕದಲ್ಲಿ ಸೇರಿಸಲಾಗಿದೆ. ಮರಾಠಿಗರು ಅಂದಿನಿಂದಲೇ ಇದನ್ನು ವಿರೋಧಿಸುತ್ತಿದ್ದು, ಈ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸುವ ವರೆಗೂ ವಿಶ್ರಮಿಸುವದಿಲ್ಲ” ಎಂದರು.

ಈ ವೇಳೆ ಗಡಿ ಜಿಲ್ಲೆ ಬೆಳಗಾವಿಯ ಮರಾಠಿಗರ ಮೇಲೆ ಅನ್ಯಾಯ ನಡೆದಿದೆ ಎಂದು ಆರೋಪಿಸಿ ಒಂದು ನಿಮಿಷ ಮೌನಾಚರಣೆಗೆ ನಡೆಸಲಾಯಿತು. ಸಭೆಯಲ್ಲಿ ಯಥಾಪ್ರಕಾರದ ಮಹಾರಾಷ್ಟ್ರಪರ ಮತ್ತು ಕರ್ನಾಟಕ ವಿರೋಧಿ ಘೋಷಣೆ ಕೂಗಲಾಯಿತು.

ತಮ್ಮ ಸಾಂಪ್ರದಾಯಕ ಘೋಷಣೆಯಾದ “ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ಸೇರಿಸಲೇ ಬೇಕು”, “ಇದ್ದರೇ ಮಹಾರಾಷ್ಟ್ರದಲ್ಲಿ ಇಲ್ಲದಿದ್ದರೆ ಜೈಲಿನಲ್ಲಿ”, ಎಂಬ ಘೋಷಣೆಗಳನ್ನೂ ಕೂಗಲಾಯಿತು.

ಸಮಿತಿಯ ಅಧ್ಯಕ್ಷ ದೀಪಕ ದಳವಿ, ಈ ಬಾರಿ ಕೋವಿಡ್ ಹಿನ್ನೆಲೆ ಮೆರವಣಿಗೆಗೆ ಜಿಲ್ಲಾಡಳಿತದಿಂದ ಅನುಮತಿ ದೊರೆತಿಲ್ಲ. ಆದರೇ ಮಹಾರಾಷ್ಟದ ಜನ ಮತ್ತು ಮಹಾರಾಷ್ಟ್ರ ಸರ್ಕಾರ ನಮಗೆ ಬೆಂಬಲವನ್ನು ಸೂಚಿಸಿದೆ. ಇದರಿಂದ ಕರ್ನಾಟಕ ಸರ್ಕಾರದಲ್ಲಿ ಭಯ ಹುಟ್ಟಿಕೊಂಡಿದೆ. ಮಹಾರಾಷ್ಟ್ರ ನಮಗೆ ಸಹಾನುಭೂತಿ, ಬೆಂಬಲ ಕೊಡುವುದು ಬೇಡ,ನಮ್ಮ ಸಮಸ್ಯ ಬಗೆಹರಿಸಿ. ಮರಾಠಿ ಭಾಷಿಕರ ಮೇಲಾಗುತ್ತಿರುವ ಅನ್ಯಾಯವನ್ನ ನಿಲ್ಲಿಸಿ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!