Jammu and Kashmir

ನ.1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

ಶ್ರೀನಗರ, ಅ 31 – ಕೇಂದ್ರ ಸರ್ಕಾರದ ಅನ್ಲಾಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಮ್ಮು ಕಾಶ್ಮೀರ ಆಡಳಿತ ನವೆಂಬರ್ 1 ರಿಂದ ಮಾತಾ ವೈಷ್ಣೋದೇವಿಯ ದೇಗುಲದಲ್ಲಿ ದಿನಕ್ಕೆ 15 ಸಾವಿರ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಿದೆ.

ಇದಕ್ಕೂ ಮುನ್ನ ಕೊರೋನ ನಿರ್ಬಂಧಗಳಿಂದಾಗಿ ದೇವಾಲಯಕ್ಕೆ ಭೇಟಿ ನೀಡಲು ಕೇವಲ 7,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಿತ್ತು. ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ರಾಜ್ಯಾಡಳಿತ ಈ ಹಿಂದೆ ನೀಡಿದ ಸೂಚನೆಗಳು ನವೆಂಬರ್ 30 ರವರೆಗೂ ಮುಂದುವರಿಯಲಿದೆ.

ಗುಹೆ ದೇಗುಲವನ್ನು ಕಳೆದ ಆಗಸ್ಟ್ 16 ರಂದು ಸುಮಾರು ಐದು ತಿಂಗಳ ನಂತರ ಪುನಃ ತೆರೆಯಲಾಗಿತ್ತು ಆರಂಭದಲ್ಲಿ, ಆಡಳಿತವು ಜಮ್ಮು ಮತ್ತು ಕಾಶ್ಮೀರದ ಹೊರಗಿನ 100 ಮಂದಿ ಸೇರಿದಂತೆ ಪ್ರತಿದಿನ 2,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಿತ್ತು.ಯಾತ್ರೆ ನೋಂದಣಿ ಕೌಂಟರ್ ಗಳಲ್ಲಿ ಜನರು ಸೇರುವುದನ್ನು ತಪ್ಪಿಸಲು ಯಾತ್ರಾರ್ಥಿಗಳ ನೋಂದಣಿ ಆನ್ ಲೈನ್ ನಲ್ಲಿ ಮುಂದುವರಿಯಲಿದೆ ಎಂದೂ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!