Tokyo

ಟರ್ಕಿ ಭೂಕಂಪ: ಸಾವಿನ ಸಂಖ್ಯೆ 24 ಕ್ಕೆ ಏರಿಕೆ

ಮಾಸ್ಕೋ, ಅ 31 – ಟರ್ಕಿಯಲ್ಲಿ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿದ್ದು, 804ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ವಿಪತ್ತು ಮತ್ತು ತುರ್ತು ಪರಿಹಾರ ನಿರ್ವಹಣಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಹಿಂದೆ ಭೂಕಂಪದಿಂದ 20 ಮಂದಿ ಸಾವನ್ನಪ್ಪಿದ್ದು, 786 ಗಾಯಗೊಂಡಿದ್ದಾರೆಂದು ವರದಿಯಾಗಿತ್ತು.
ಇದೀಗ ಸಾವಿನ ಸಂಖ್ಯೆ 24ಕ್ಕೆ , ಗಾಯಗೊಂಡವರ ಸಂಖ್ಯೆ 804 ಕ್ಕೆ ಏರಿದೆ ಎಂದು ಪ್ರಕಟಣೆ ತಿಳಿಸಿದೆ.ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಭರದಿಂದ ಸಾಗಿವೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗಬಹುದಾದ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಟರ್ಕಿಗೆ ನಿನ್ನೆ ಅಪ್ಪಳಿಸಿದ ಭೀಕರ ಭೂಕಂಪದಿಂದ ಅಪಾರ ಆಸ್ತಿ-ಪಾಸ್ತಿ ನಷ್ಟ ಮತ್ತು ಸಾವು-ನೋವು ಸಂಭವಿಸಿದ್ದು, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳು ನೆರವಿನ ಸಹಾಯ ಹಸ್ತ ಚಾಚಿವೆ.

Leave a Reply

Your email address will not be published. Required fields are marked *

Back to top button
error: Content is protected !!