Belagavi

ಸಾಧ್ಯವಾಗದ ಅವಿರೋಧ ಆಯ್ಕೆ; ಡಿಸಿಸಿ ಬ್ಯಾಂಕ್ ೩ ಸ್ಥಾನಗಳಿಗೆ 6 ರಂದು ಚುನಾವಣೆ

ಬೆಳಗಾವಿ : ಬೆಳಗಾವಿ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಮಾಡಬೇಕೆಂಬ ಬಿಜೆಪಿ ಮುಖಂಡರ ಪ್ರಯತ್ನ ಯಶಸ್ವಿಯಾಗಿಲ್ಲ. ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಶನಿವಾರ ಮೂವರು ಅಭ್ಯರ್ಥಿಗಳು ಹಿಂಪಡೆಯದರಿಂದ ಚುನಾವಣೆ ಅನಿವಾರ್ಯವಾಗಿದೆ.

ಬ್ಯಾಂಕ ನ 16 ಸ್ಥಾನಗಳ ಪೈಕಿ 13ಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಖಾನಾಪುರ ಕೃಷಿ ಪತ್ತಿನ ಸಂಘ, ರಾಮದುರ್ಗ ಕೃಷಿ ಪತ್ತಿನ ಸಂಘ ಮತ್ತು ನೇಕಾರರ ಸಂಘಗಳ ಪ್ರತಿನಿಧಿ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ. ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ಮತ್ತು ಹಾಲಿ ಶಾಸಕಿ ಅಂಜಲಿ ನಿಂಬಾಳಕರ ಮಧ್ಯೆ ಸ್ಪರ್ಧೆ ನಡೆಯಲಿದೆ.

ರಾಮದುರ್ಗದಿಂದ ಭೀಮಪ್ಪ ಬೆಳವಣಿಕಿ, ಶ್ರೀಕಾಂತ ಡವಣ ಮಧ್ಯೆ, ನೇಕಾರರ ಕ್ಷೇತ್ರದಿಂದ ಗಜಾನನ ಕ್ವಳ್ಳಿ ಮತ್ತು ಕೃಷ್ಣ ಆನಗೋಳಕರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ಎಲ್ಲ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಮಾಡಬೇಕೆನ್ನುವ ಬಿಜೆಪಿ ನಾಯಕರ ಯತ್ನಕ್ಕೆ ಫಲ ದೊರೆಯಲಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!