New Delhi

ದೇಶದ ನಾಗರೀಕ ವಿಮಾನಯಾನ ಇತಿಹಾಸದಲ್ಲಿ ಮೊದಲ ಮಹಿಳಾ ಸಿಇಓ

ನವದೆಹಲಿ, ಅ 31- ದೇಶದ ನಾಗರೀಕ ವಿಮಾನಯಾನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ವಿಮಾನಯಾನ ಸಂಸ್ಥೆಯ ಚುಕ್ಕಾಣಿ ವಹಿಸಿಕೊಳ್ಳಲಿದ್ದಾರೆ. ಏರ್ ಇಂಡಿಯಾ ಪ್ರಾದೇಶಿಕ ಅಂಗ ಸಂಸ್ಥೆ ಅಲೈಯನ್ಸ್ ಏರ್ ನ ಸಿಇಓ ಆಗಿ ಕ್ಯಾಪ್ಟನ್ ಹರ್ ಪ್ರೀತ್ ಸಿಂಗ್ ಅವರನ್ನು ನೇಮಿಸಿ ಏರ್ ಇಂಡಿಯಾ ಸಿಎಂಡಿ ರಾಜೀವ್ ಭನ್ಸಾಲ್ ಆದೇಶ ಹೊರಡಿಸಿದ್ದಾರೆ.

ಮುಂದಿನ ಆದೇಶದವರೆಗೆ ಹರ್ಪ್ರೀತ್ ಸಿಂಗ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಹರ್ ಪ್ರೀತ್ ಸಿಂಗ್ ಪ್ರಸ್ತುತ ಏರ್ ಇಂಡಿಯಾ ಫ್ಲೈಟ್ ಸೇಫ್ಟಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರ ಸ್ಥಾನಕ್ಕೆ ಕ್ಯಾಪ್ಟನ್ ರೆಪೊರಿಟಾ ಭಾಸಿನ್ ನೇಮಕಗೊಳ್ಳಲಿದ್ದಾರೆ.

ಏರ್ ಇಂಡಿಯಾಕ್ಕೆ ಆಯ್ಕೆಗೊಂಡ ಮೊದಲ ಮಹಿಳಾ ಪೈಲಟ್ ಹರ್ ಪ್ರೀತ್ ಸಿಂಗ್ ಎಂಬುದು ವಿಶೇಷ, ಆದರೆ, ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಪೈಲಟ್ ಆಗದೆ, ವಿಮಾನಯಾನ ಭದ್ರತಾ ವಿಭಾಗಕ್ಕೆ ಸೇರಿದರು. ಅಲ್ಲಿ ಅವರು ವಿಶೇಷ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಭಾರತೀಯ ಮಹಿಳಾ ಪೈಲಟ್ ಸಂಘದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ಏರ್ ಇಂಡಿಯಾ ಅತಿ ಹೆಚ್ಚು ಮಹಿಳಾ ಪೈಲೆಟ್ ಗಳನ್ನು ಹೊಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!