Sports

ಗೆಲ್ಲಲೇಬೇಕಾದ ಒತ್ತಡದಲ್ಲಿ ಕೋಲ್ಕೊತಾ, ರಾಯಲ್ಸ್

ದುಬೈ, ಅ 31- ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಪ್ಲೇಆಫ್ ಸ್ಥಾನಕ್ಕೆ ಸ್ಪರ್ಧೆ ಒಡ್ಡಬೇಕಾದರೆ ಭಾನುವಾರದ ಮುಖಾಮುಖಿಯಲ್ಲಿ ಗೆಲ್ಲಲೇಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯುತ್ತಿವೆ.

ಆಡಿರುವ 13 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 12 ಅಂಕ ಹೊಂದಿವೆ. ಈಗಾಗಲೇ 16 ಅಂಕಗಳೊಂದಿಗೆ ಮುಂಬಯಿ ಇಂಡಿಯನ್ಸ್ ಪ್ಲೇಆಫ್ ಸ್ಥಾನಕ್ಕೆ ಅರ್ಹತೆ ಗಳಿಸಿದೆ. ತಲಾ 14 ಅಂಕ ಹೊಂದಿರುವ ಬೆಂಗಳೂರು ಮತ್ತು ಡೆಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 12 ಅಂಕ ಹೊಂದಿರುವ ಪಂಜಾಬ್ ಸಹ ನಾಲ್ಕನೇ ಸ್ಥಾನದಲ್ಲಿದ್ದು, ಪ್ಲೇಆಫ್ ಗೆ ಎದುರು ನೋಡುತ್ತಿದೆ.
ಹಲವು ತಂಡಗಳು 14 ಅಂಕ ಗಳಿಸುವ ಸಾಧ್ಯತೆ ಇರುವ ಕಾರಣ ಪ್ಲೇಆಫ್ ಸ್ಥಾನಕ್ಕೆ ಅರ್ಹತೆ ಹೊಂದಲು ಎಲ್ಲ ತಂಡಗಳ ನಡುವೆ ನೆಟ್ ರನ್ ರೇಟ್ ಗಣನೆಗೆ ಬರಲಿದೆ. ಹೀಗಾಗಿ ಎಲ್ಲ ತಂಡಗಳಿಗೂ ಕೊನೆಯ ಪಂದ್ಯಗಳು ಅತ್ಯಂತ ಮಹತ್ವದಿಂದ ಕೂಡಿವೆ. ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿರುವ ಕೋಲ್ಕೊತಾ ತನಗೆ ಪೈಪೋಟಿಯಾಗಿರುವ ರಾಜಸ್ಥಾನ್ ವಿರುದ್ಧ ಪುಟಿದೇಳುವ ವಿಶ್ವಾಸದಲ್ಲಿದೆ. ಅತ್ತ ಪಂಜಾಬ್ ತಂಡದ ದಿಟ್ಟ ಸವಾಲನ್ನು ಮೆಟ್ಟಿನಿಂತು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ರಾಜಸ್ಥಾನ್ ತನ್ನ ಕೊನೆಯ ಲೀಗ್ ಪಂದ್ಯ ಗೆದ್ದು ಪ್ಲೇಆಫ್ ಗೆ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ಜತೆಗೆ ಸ್ಮಿತ್ ಮತ್ತು ಸ್ಯಾಮ್ಸನ್ ಲಯ ಕಂಡುಕೊಂಡಿರುವ ರಾಯಲ್ಸ್ ತಂಡದ ಭರವಸೆಯನ್ನು ಇಮ್ಮಡಿಗೊಳಿಸಿದೆ. ಇನ್ನು ಜೋಫ್ರಾ ಆರ್ಚರ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.
ಪಂದ್ಯ ಆರಂಭ:ರಾತ್ರಿ 7.30ಕ್ಕೆ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ, ದುಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸಂಭಾವ್ಯ ತಂಡಗಳು
ಕೋಲ್ಕೊತಾ ನೈಟ್ ರೈಡರ್ಸ್
ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಶಿವಂ ಮಾವಿ, ಟಾಮ್ ಬ್ಯಾಂಟನ್, ಸುನೀಲ್ ನರೈನ್, ಪ್ಯಾಟ್ ಕಮಿನ್ಸ್, ವರುಣ್ ಚಕ್ರವರ್ತಿ, ಲೂಕಿಫರ್ಗ್ಯೂಸನ್.
ರಾಜಸ್ಥಾನ್ ರಾಯಲ್ಸ್
ಸ್ಟೀವನ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್, ರಿಯಾನ್ ಪರಾಗ್, ರಾಹುಲ್ ತೆವತಿಯಾ , ಶ್ರೇಯಸ್ ಗೋಪಾಲ್, ಜೋಸ್ ಬಟ್ಲರ್, ಕಾರ್ತಿಕ್ ತ್ಯಾಗಿ, ವರುಣ್ ಆ್ಯರೋನ್, ಜೋಫ್ರಾ ಆರ್ಚರ್.

Related Articles

Leave a Reply

Your email address will not be published. Required fields are marked *

Back to top button
error: Content is protected !!