Belagavi

“ಕನ್ನಡವೆಂದರೆ ಕುಣಿಯುವೆನು…ಎಂದು ಹಾಡಿದ ಜಿಲ್ಲಾಧಿಕಾರಿ!

ಬೆಳಗಾವಿ, ಅ.31- “ಕನ್ನಡವೆಂದರೆ ಕುಣಿಯುವೆನು….ಕನ್ನಡವೆಂದರೆ ಮಣಿಯುವೆನು…!”

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಹೀಗೆ ಹಾಡುತ್ತಿರುವಾಗ ಉಳಿದವರಿಗೂ ಕನ್ನಡಾಭಿಮಾನ ಉಕ್ಕಿ ಬಂತು.

 

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶನಿವಾರ ನಡೆದ ” ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಾಗಿರುವುದು ಏನು” ವಿಷಯ ಕುರಿತು ಸಾಹಿತಿಗಳೊಂದಿಗೆ ನಡೆದ ಫೇಸ್‌ಬುಕ್‌ ಲೈವ್ ಸಂವಾದದಲ್ಲಿ ಜಿಲ್ಲಾಧಿಕಾರಿಗಳು ಕನ್ನಡಪ್ರೇಮ‌ ಮೆರೆದರು.

“ಕನ್ನಡ ನಾಡನು, ಕನ್ನಡ ನುಡಿಯನು ಕಣ್ಣಿನಂತೆ ಕಾಪಾಡುವೆನು…ಕನ್ನಡ ಬಾವುಟ ಮೆರೆಸುವೇನು” ಎಂದು ಜಿಲ್ಲಾಧಿಕಾರಿಗಳು ಹಾಡಿದಾಗ ವೇದಿಕೆಯಲ್ಲಿದ್ದ ಹಿರಿಯ ಸಾಹಿತಿಗಳು ತಲೆದೂಗಿದರು.

ಕಾಲೇಜು ದಿನಗಳಲ್ಲಿ ‌ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿರುವುದನ್ನು ನೆನಪಿಸಿಕೊಂಡ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ನಾಡು-ನುಡಿಯ ರಕ್ಷಣೆಯ ತಮ್ಮ ಬದ್ಧತೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿ ಮೆಚ್ಚುಗೆಗೆ ಪಾತ್ರರಾದರು.

ಫೇಸ್‌ಬುಕ್‌ ಲೈವ್ ಪ್ರಸಾರವಾದ ಈ ಹಾಡನ್ನು ಕೇಳಿ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!