Hyderabad

ಬಾಲಕಿಯ ಅತ್ಯಾಚಾರ, ಕೊಲೆ ಮುಚ್ಚಿಹಾಕಲು 9 ಜನರನ್ನು ಬಾವಿಗೆ ನೂಕಿ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ

ಹೈದರಾಬಾದ್, 31- ತೆಲಂಗಾಣದಲ್ಲಿ ಒಂದೇ ಬಾವಿಯಲ್ಲಿ ಒಂಭತ್ತು ಜನರನ್ನು ನೂಕಿ ಹತ್ಯೆ ಮಾಡಿದ್ದ ಬಿಹಾರ ವ್ಯಕ್ತಿಗೆ ವಾರಂಗಲ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಬಿಹಾರಿನ 24 ವರುಷದ ಸಂಜಯ ಕುಮಾರ ಯಾದವ ಎಂಬಾತ ಒಂದು ಕೊಲೆಯನ್ನು ಮಾಡಿದ್ದ, ಅದನ್ನು ಮುಚ್ಚಿಡಲು ಒಂದೇ ಕುಟುಂಬದ ಆರು ಜನಸೇರಿ ಒಟ್ಟು ಒಂಭತ್ತು ಜನರನ್ನು ಒಂದೇ ಬಾವಿಗೆ ನೂಕಿ ಹತ್ಯೆಗೈದಿದ್ದ . ಇಷ್ಟೇ ಅಲ್ಲದೇ 16 ವರುಷದ ಬಾಲಕಿಯೊಬ್ಬರ ಮೇಲೆ ಅತ್ಯಾಚಾರಕೂಡ ಎಸಗಿದ್ದ.

ಸಂಜಯ‌ ಕುಮಾರ‌ ಯಾದವ‌ ಕಳೆದ ಮಾರ್ಚ್‌ನಲ್ಲಿ ಒಂದು ಹಾಗೂ ಮೇನಲ್ಲಿ 10 ಕೊಲೆ ಎಸಗಿದ್ದ.

ಸಂಜಯ‌ ಆರು ವರ್ಷಗಳ ಹಿಂದೆ ಬಿಹಾರದಿಂದ ವಾರಂಗಲ್‌ಗೆ ವಲಸೆ ಬಂದ್ದು ಇಲ್ಲಿನ ಗೋಣಿಚೀಲ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಇದೇ ಪ್ರದೇಶಕ್ಕೆ ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಕುಟುಂಬದ ಮಹಿಳೆಯೊಬ್ಬರೊಂದಿಗೆ ಜತೆ ಸಂಜಯ‌ ಸಹ ಜೀವನ ನಡೆಸುತ್ತಿದ್ದ. ಕ್ರಮೇಣ ಆ ಮಹಿಳೆಯ 16 ವರ್ಷದ ಮಗಳ ಜತೆಗೂ ಸಲುಗೆ ಬೆಳೆಸಿ, ಅತ್ಯಾಚಾರ ಎಸಗಿದ್ದ.

ವಿಷಯ ತಿಳಿದ ಮಹಿಳೆ ಜಗಳ ಮಾಡ್ದಿದಾಗೆಲ್ಲ ‘ನಿನ್ನ ಮಗಳನ್ನು ಮದುವೆಯಾಗುವೆ’ ಎಂದು ನಂಬಿಸಿ ಮಾರ್ಚ್ 6 ರಂದು ಆ ಮಹಿಳೆಯನ್ನು ಅವರ ರಾಜ್ಯವಾದ ಪಶ್ಚಿಮ ಬಂಗಾಳಕ್ಕೆ ರೈಲಿನಲ್ಲಿ ಕರೆದೊಯ್ಯುತ್ತಿದ್ದ. ಪ್ರಯಾಣದಲ್ಲಿದಾಗಲೇ ಅವರಿಗೆ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದ ಮಜ್ಜಿಗೆ ಕುಡಿಯಲು ನೀಡಿ ಅವರು ಪ್ರಜ್ಞೆ ತಪ್ಪಿದಾಗ ಚಲಿಸುವ ರೈಲಿನಿಂದ ಕೆಳಕ್ಕೆ ನೂಕಿ ಸಾಯಿಸಿದ್ದ.

ಮಹಿಳೆಯ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದರು. ಮೇ ತಿಂಗಳಲ್ಲಿ ಸಂಜಯ, ಚಲಿಸುವ ರೈಲಿನಿಂದ ನೂಕಿ ಕೊಲೆಮಾಡಿದ್ದ ಮಹಿಳೆಯ ಕುಟುಂಬದ ಆರು ಸದಸ್ಯರು ಸೇರಿ ಒಟ್ಟು 9 ಮಂದಿಗೆ ಮಂಪರು ಬರುವ ಮಾತ್ರೆ ನೀಡಿ, ಒಬ್ಬೊಬ್ಬರನ್ನು ಬಾವಿಗೆ ತಳ್ಳಿ ಸಾಯಿಸಿದ್ದ.

ಬಾವಿಯಲ್ಲಿ ಒಂದರ ಹಿಂದೆ ಒಂದು ಶವಗಳು ಪತ್ತೆಯಾಗುತ್ತಿದಂತೆ ತೆಲಂಗಾಣ, ಆಂಧ್ರಪ್ರದೇಶಗಳು ಆತಂಕಕ್ಕೆ ಒಳಗಾಗಿ ತಲ್ಲಣಗೊಂಡಿದ್ದವು. ತನಿಖೆಗೆ ವಿಶೇಷ ಪೊಲೀಸ್‌ ತಂಡವೊಂದನ್ನು ನೇಮಿಸಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!