Bagalkotte

ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು

ಬಾಗಲಕೋಟೆ, ಅ 30- ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬದಾಮಿ ಪಟ್ಟಣದಲ್ಲಿ ವರದಿಯಾಗಿದೆ.

ಬಾಚಿನಗುಡ್ಡ ಗ್ರಾಮದವರಾದ ಬಸವರಾಜ ಮಾಂತಯ್ಯ ಹಿರೇಮಠ, ಪ್ರವೀಣ ರೋಣದ ಮೃತ ಬಾಲಕರು.

ಗುರುವಾರ ಸಂಜೆ ನದಿಯಲ್ಲಿ ಈಜಲು ಹೋದವರು ಮನೆಗೆ ಮನೆಗೆ ಹಿಂದಿರುಗಲಿಲ್ಲ. ಶುಕ್ರವಾರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!