Bengaluru

ಪೊಲೀಸ್ ಇಲಾಖೆ ಪಕ್ಷಾತೀತವಾಗಿರಬೇಕು, ಒಂದು ಪಕ್ಷದ ಪರ ಕೆಲಸ ಮಾಡುವದು ತಪ್ಪು -ಸಿದ್ದರಾಮಯ್ಯ

ಬೆಂಗಳೂರು, ೩೦- ಚುನಾವಣೆಯಲ್ಲಿ ಪೊಲೀಸರು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿರುವ ಆರೋಪಗಳ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದು “ಪೊಲೀಸರಿಗೆ ಮುಂದೆ ಕಾದಿದೆ ಕಷ್ಟ” ಎಂದು ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಜಾಲಹಳ್ಳಿ, ಪೀಣ್ಯ ಮತ್ತಿತರ ವಾರ್ಡ್ ನಲ್ಲಿ ಶುಕ್ರವಾರ ರೋಡ್‌ ಶೋ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಮತ ಯಾಚನೆ ಮಾಡಿ ಮಾತನಾಡಿದ ಅವರು, ಪೊಲೀಸರು ಒಂದು ಪಕ್ಷದ ಪರ ಕೆಲಸ ಮಾಡಿದರೆ ಸಹಿಸುವುದಿಲ್ಲ. ಪೊಲೀಸ್ ಇಲಾಖೆ ಪಕ್ಷಾತೀತವಾಗಿರಬೇಕು, ಒಂದು ಪಕ್ಷದ ಪರ ಕೆಲಸ ಮಾಡುವದು ತಪ್ಪು ಎಂದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಎಂದು ಮುನಿರತ್ನ ಪರ ಕೆಲಸ ಮಾಡಿದರೆ ಮುಂದೆ ಕಷ್ಟದ ದಿನಗಳು ಕಾದಿವೆ ಎಂದು ಪೊಲೀಸರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ವಿರೋಧಿಗಳನ್ನು ಹೆದರಿಸಿ, ಬೆದರಿಸಿ ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಮುನಿರತ್ನ ಎರಡು ಬಾರಿ ಶಾಸಕರಾಗಲು ಕಾಂಗ್ರೆಸ್ ಕಾರಣವೇ ಹೊರತು ಅವರ ವೈಯಕ್ತಿಕ ಹಿನ್ನಲೆ, ಕಾರ್ಯಗಳಲ್ಲ. ಇದನ್ನು ಅವರು ನೆನಪಿಡಬೇಕೆಂದು ಸಿದ್ದರಾಮಯ್ಯ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!