Mumbai

ಫೇಸ್ ಮಾಸ್ಕ್ ಧರಿಸದಿದ್ದರೆ ಬೀದಿ ಕಸಗುಡಿಸುವ ಶಿಕ್ಷೆ

ಮುಂಬಯಿ : ಕೊರೊನಾ ಸೋಂಕು ನಿದಾನವಾಗಿ ಹತೋಟಿಗೆ ಬರುತ್ತಿದೆ, ಅದು ಪುನಃ ಹಬ್ಬಲು ಆಸ್ಪದಕೊಡದೆ ಜನ ಎಚ್ಚರಿಕೆಯಿಂದಿರಬೇಕೆಂಬ ಉದ್ದೇಶದಿಂದ ಬೃಹನ್ಮೂಬೈ ಮಹಾನಗರ ಪಾಲಿಕೆ ಫೇಸ್ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಜನರಿಗೆ ಎರಡು ನೂರು ರೂಪಾಯಿ ದಂಡವಿದಿಸುತ್ತಿದೆ, ದಂಡ ನೀಡಲು ತಪ್ಪಿದರೆ ಒಂದು ತಾಸು ರಸ್ತೆ, ಬೀದಿಯ ಕಸಗುಡಿಸುವ ಶಿಕ್ಷೆ ನೀಡಲು ಪ್ರಾರಂಭಿಸಿದೆ.

ಈ ನಿಯಮದಂತೆ ನಿನ್ನೆ ಗುರುವಾರದ ವರೆಗೆ ದಂಡ ಕಟ್ಟಲು ವಿಫಲರಾದ 35ಕ್ಕೂ ಹೆಚ್ಚು ಜನ ಪಾಲಿಕೆ ಒದಗಿಸಿದ ಕಸಪೊರಕೆ ಹಿಡಿದು ರಸ್ತೆ ಕಸ ಗುಡಿಸಿದ್ದಾರೆ. ಈ ನಿಯಮ ಅಂಧೇರಿ, ಜುಹು ಪ್ರತಿಷ್ಠಿತ ಪ್ರದೇಶವಿರುವ ಕೆ.ವೆಸ್ಟ್ ವಾರ್ಡ್ ನಲ್ಲಿ ಜಾರಿಗೆ ಬಂದಿದ್ದು ಮುಂಬಯಿ ನಗರದಾದ್ಯಂತ ಶೀಘ್ರದಲ್ಲಿ ಜಾರಿಗೆ ಬರಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!