Mumbai

ರಾಜ್ಯೋತ್ಸವದಂದು ಕಪ್ಪು ಪಟ್ಟಿಕಟ್ಟಿಕೊಂಡು ಕೆಲಸ ಮಾಡಲಿದ್ದಾರೆ ಮಹಾರಾಷ್ಟ್ರ ಸಚಿವರು

ಮುಂಬಯಿ : ಕರ್ನಾಟಕದಲ್ಲಿರುವ ಮಹಾರಾಷ್ಟ್ರವಾದಿಗಳು ಕರ್ನಾಟಕ ರಾಜ್ಯೋತ್ಸವ ದಿನದಂದು ಆಚರಿಸುವ ಕರಾಳ ದಿನಕ್ಕೆ ಮಹಾರಾಷ್ಟ್ರ ಸರಕಾರ ಬೆಂಬಲ ಸೂಚಿಸಿದ್ದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಅವರ ಸಂಪುಟದ ಸಚಿವರೆಲ್ಲ ಅಂದು ಭುಜಕ್ಕೆ ಕಪ್ಪು ರಿಬ್ಬಿನ್ ಕಟ್ಟಿಕೊಳ್ಳಲಿದ್ದಾರೆ.

ಮಹಾರಾಷ್ಟ್ರವಾದಿಗಳು ಕರ್ನಾಟಕದಲ್ಲಿ ಆಚರಿಸುವ ಕರಾಳ ದಿನಾಚರಣೆ ಬೆಂಬಲಿಸಲು ಮಹಾರಾಷ್ಟ್ರದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುಂಬೈನಲ್ಲಿ ‌ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ ತಿಳಿಸಿದ್ದಾರೆ.

ನವೆಂಬರ್ 1ರಂದು ಮಹಾರಾಷ್ಟ್ರ ಸಚಿವರೆಲ್ಲರೂ ಭುಜಕ್ಕೆ ಕಪ್ಪು ಪಟ್ಟಿ ಧರಿಸಲಿದ್ದಾರೆ. ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರ್ಕಾರ ನಿರಂತರ ಅನ್ಯಾಯ, ದಬ್ಬಾಳಿಕೆ ಮಾಡ್ತಿದೆ. ಮರಾಠಿ ಭಾಷಿಕರ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ, ಅದನ್ನು ಪ್ರತಿಭಟಿಸಲು ಈ ಪ್ರತಿಭಟನೆಯೆಂದು ಹೇಳಿದರು. ಕರ್ನಾಟಕದ ಮರಾಠಿ ಭಾಷಿಕರ ಹೋರಾಟಕ್ಕೆ ಮಹಾರಾಷ್ಟ್ರದ ಸಂಪೂರ್ಣ ಬೆಂಬಲ ಇದೆ ಎಂದರು.

ಕರ್ನಾಟಕದ ಮರಾಠಿ ಭಾಷಿಕರನ್ನುದ್ದೇಶಿಸಿ ಪತ್ರವೊಂದನ್ನೂ ಬರೆದಿರುವ ಶಿಂದೆ ಹಾಗು ಸಚಿವ ಛಗನ್ ಭುಜಬಲ್ ಮರಾಠಿಗರ ಹೋರಾಟಕ್ಕೆ ಬೆಂಬಲವನ್ನೂ ಸೂಚಿಸಿದ್ದಾರೆ.

ಆದರೆ ಕರಾಳದಿನಾಚರಣೆಗೆ ಮಹಾರಾಷ್ಟ್ರವಾದಿಗಳಿಗೆ ಅನುಮತಿ ನೀಡದಂತೆ ಕನ್ನಡ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!