Chennai

ರಜನೀಕಾಂತ ತಮ್ಮ ಆರೋಗ್ಯ ಕುರಿತ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಹೇಳಿದ್ದೇನು?

ಚೆನ್ನೈ, ಅ 29- ತಮಿಳು ಚಿತ್ರರಂಗದ ಸುಪರ್‌ಸ್ಟಾರ್ ರಜನಿಕಾಂತ್ ಕಳೆದ ರಾತ್ರಿಯಿಂದ ತಮ್ಮ ಆರೋಗ್ಯ ಕುರಿತು ಹಬ್ಬಿರುವ ಹಲವು ವದಂತಿಗಳಿಗೆ ಟ್ವಿಟ್ಟರ್ ಮೂಲಕ ಅಂತ್ಯವಾಡಿದ್ದಾರೆ.

ರಜನಿಕಾಂತ್ 2011 ರಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು, ಅವರು ಸಿಂಗಪುರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರಜನಿಕಾಂತ್ ಹೆಸರಿನಲ್ಲಿ ಪ್ರಕಟವಾದ ಪತ್ರದಲ್ಲಿ ತಿಳಿಸಲಾಗಿದೆ. ಇನ್ನೂ 2016 ರಲ್ಲಿ ಮತ್ತೆ ಸಮಸ್ಯೆ ಉಲ್ಬಣಿಸಿದಾಗ, ಅಮೆರಿಕಾಗೆ ತೆರಳಿ ಮೂತ್ರ ಪಿಂಡ ಬದಲಾವಣೆ ಮಾಡಿಸಿಕೊಂಡಿದ್ದಾಗಿ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಪತ್ರದಲ್ಲಿರುವ ಈ ಅಂಶಗಳು ಸತ್ಯ ಎಂದು ತಲೈವಾ ಸ್ಪಷ್ಟಪಡಿಸಿದ್ದಾರೆ.

ಆದರೆ, ಅಭಿಮಾನಿಗಳನ್ನು ಉದ್ದೇಶಿಸಿಸಿ ನಾನು ಬರೆದಿರುವೆ ಎಂದು ಹೇಳಲಾಗುತ್ತಿರುವ ಪತ್ರ ಮಾತ್ರ ನನ್ನದಲ್ಲ ಎಂದು ರಜಿನಿಕಾಂತ್ ಹೇಳಿದ್ದಾರೆ. ರಜನಿ ಮಕ್ಕಳ್ ಮಂದ್ರ ಸದಸ್ಯರೊಂದಿಗೆ ಚರ್ಚಿಸಿ ನಂತರ ರಾಜಕೀಯ ಪಕ್ಷ ಸ್ಥಾಪನೆಗೆ ಸಂಬಂಧಿಸಿದಂತೆ ಅಧಿಕೃತ ಘೋಷಣೆ ಮಾಡುತ್ತೇನೆ ಎಂದು ತಲೈವಾ ತಿಳಿಸಿದ್ದಾರೆ.

ಆದರೆ, ರಜನಿಕಾಂತ್ ಹೆಸರಿನಲ್ಲಿ ಹರಿದಾಡಿರುವ ಪತ್ರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿ ಕೊಂಡಿರುವ ಕಾರಣ, ರೋಗ ನಿರೋಧಕ ಶಕ್ತಿ ಕಡಿಮೆಯಿದ್ದು, ಕೊರೊನಾ ಸಮಯದಲ್ಲಿ ರಾಜಕೀಯ ಪಕ್ಷ ಪ್ರಕಟಿಸುವುದು, ಎಲ್ಲರೊಂದಿಗೆ ಸಭೆ ಸೇರುವುದು ಜೀವಕ್ಕೆ ಅಪಾಯಕಾರಿಯಾಗಿದೆ, ಹಾಗಾಗಿ ಪಕ್ಷ ಘೋಷಣೆಯ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!