Koppal

ಚಿತ್ರ ಸಾಹಿತಿ ಕಲ್ಯಾಣ ಕುಟುಂಬದ ಕಲಹಕ್ಕೆ ಕಾರಣವಾಗಿದ್ದಳು ಎನ್ನಲಾದ ಗಂಗಾ ಕುಲಕರ್ಣಿ ಆತ್ಮಹತ್ಯೆ

ಕೊಪ್ಪಳ, 29- ಕನ್ನಡ ಚಲನಚಿತ್ರದ ಖ್ಯಾತ ಚಿತ್ರ ಸಾಹಿತಿ ಕೆ.ಕಲ್ಯಾಣ ಕೌಟುಂಬಿಕ ಜೀವನದಲ್ಲಿ ಉಂಟಾಗಿದ್ದ ಬಿರುಕಿಗೆ ಕಾರಣವಾಗಿದ್ದ ಬಾಗಲಕೋಟ ಜಿಲ್ಲೆಯ ಗಂಗಾ ಕುಲಕರ್ಣಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಲ್ಯಾಣ ಹಾಗೂ ಅಶ್ವಿನಿ ದಾಂಪತ್ಯದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣಳಾಗಿದ್ದಳೆಂದು ಆರೋಪ ಹೊತ್ತಿದ್ದ ಅಡುಗೆ ಕೆಲಸದ ಗಂಗಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗುರುವಾರ ಕೊಪ್ಪಳದ ಕುಷ್ಟಗಿ ಕೋರ್ಟ್ ಗೆ ಹಾಜರಾಗಿದ್ದರು. ಕೋರ್ಟ್ ಗೆ ಬರುವ ಮುನ್ನವೇ ಗಂಗಾ ವಿಷ ಸೇವಿಸಿದ್ದರು ಎನ್ನಲಾಗಿದೆ. ಕೋರ್ಟ್ ಆವರಣದಲ್ಲಿಯೇ ಗಂಗಾ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕೆಲ ವರ್ಷಗಳ ಹಿಂದೆ ಗಂಗಾ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಹಲವು ಜನರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದರು ಎನ್ನಲಾಗಿದೆ. ಇದೇ ಪ್ರಕರಣದ ವಿಚಾರಣೆ ಸಂಬಂಧ ಗಂಗಾ ಇಂದು ಕುಷ್ಟಗಿ ಕೋರ್ಟ್ ಗೆ ಹಾಜರಾಗಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!