Chennai

ಚೆನ್ನೈ ನಲ್ಲಿ ಭಾರಿ ಮಳೆ; ರಸ್ತೆಗಳು ಜಲಾವೃತ

ಚೆನ್ನೈ , ಅ 29- ಚೆನ್ನೈನಲ್ಲಿ ಗುರುವಾರ ಮುಂಜಾನೆ 3 ಗಂಟೆಯಿಂದಲೇ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು ಅನೇಕ ರಸ್ತೆಗಳು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಚೆನ್ನೈನ ಹಲವು ಪ್ರದೇಶಗಳು ಭಾರಿ ಮಳೆಯ ನಂತರ ನೀರು ಹರಿದು ಜಲಾವೃತವಾಗಿದ್ದು ಇನ್ನು ಕೆಲ ಸಮಯದವರೆಗೆ ಮಳೆ ಮುಂದುವರಿಯಲಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ತಮಿಳುನಾಡು ಮತ್ತು ಕೇರಳ ಸೇರಿದಂತೆ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಈಶಾನ್ಯ ಮುಂಗಾರು ಪ್ರಾರಂಭವಾಗಿದೆ ಎಂದು ಐಎಂಡಿ ಬುಧವಾರ ಹೇಳಿದೆ. ಜನಪ್ರಿಯ ತಮಿಳುನಾಡು ಹವಾಮಾನ ತಜ್ಞ ಪ್ರದೀಪ ಜಾನ್, ನಗರದಲ್ಲಿ ಕೆಲವೇ ಗಂಟೆಗಳಲ್ಲಿ ಕನಿಷ್ಠ 150 ಮಿಲಿಮೀಟರ್ ನಿಂದ 200 ಮಿಲಿಮೀಟರ್ ಮಳೆಯಾಗಿದೆ ಎಂದು ಹೇಳಿದ್ದಾರೆ. ಭಾರಿ ಮಳೆಯಿಂದ ರಸ್ತೆಗಳು ಜಲಾವೃತದಿಂದಾಗಿ ಅನೇಕ ಪ್ರಯಾಣಿಕರು ಸಿಲುಕಿಕೊಂಡಿದ್ದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!