Bellary

ಹೊಲದಲ್ಲಿ ಬೆಳೆದಿದ್ದ 1.75 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಬಳ್ಳಾರಿ, ಅ.28- ಮೆಣಸಿನಕಾಯಿ ಬೆಳೆಯೊಂದಿಗೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ರೈತನನ್ನು ಪೊಲೀಸರು ಬಂಧಿಸಿ 1.75ಲಕ್ಷ ರೂ ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದ್ದಾರೆ. ಕರಿಲಿಂಗಪ್ಪ ತಂದೆ ಪಂಪಣ್ಣ ಬಂಧಿತ ರೈತ.

ಸಿರುಗುಪ್ಪ ಪೊಲೀಸ್ ಠಾಣೆಯ ಅಧಿಕಾರಿ ಸಿಪಿಐ ಟಿಆರ್ ಪವಾರ ಹಾಗೂ ಪಿಎಸ್ ಐ ಗಂಗಪ್ಪ ಬುರ್ಲಿ ಮತ್ತು ಸಿಬ್ಬಂದಿಗಳ ತಂಡವು ಬುಧವಾರ ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ತಾಲ್ಲೂಕಿನ ರಾರವಿಯ ಕರಿಲಿಂಗಪ್ಪ ತಂದೆ ಪಂಪಣ್ಣ ಎಂಬುವವರ ಹೊಲದ ಮೇಲೆ ದಾಳಿ ನಡೆಸಿ, ಮೆಣಸಿನ ಗಿಡಗಳ ಜೊತೆಗೆ ಅಕ್ರಮವಾಗಿ ಬೆಳೆದಿದ್ದ 13 ಗಾಂಜಾ ಗಿಡಗಳು ( 35 ಕೆಜಿ 200 ಗ್ರಾಂ ) ವಶ ಪಡಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!