New Delhi

ಸ್ಮೃತಿ ಇರಾನಿಗೆ ಕೋವಿಡ್

ನವದೆಹಲಿ, ಅ 28 – ಕೋವಿಡ್ ಪರೀಕ್ಷೆಯಲ್ಲಿ ತಮಗೆ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಬುಧವಾರ ತಿಳಿಸಿದ್ದಾರೆ.

‘ಪ್ರಕಟಣೆ ನೀಡುವಾಗ ಪದಗಳನ್ನು ಹುಡುಕುವುದು ನನಗೆ ಅಪರೂಪವಾಗಿರುವುದರಿಂದ ಸರಳವಾಗಿ ಹೇಳುತ್ತಿದ್ದೇನೆ. ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ತಕ್ಷಣವೇ ಪರೀಕ್ಷೆಗೆ ಒಳಪಡಲು ವಿನಂತಿಸುತ್ತಿದ್ದೇನೆ.’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಸಾಂಕ್ರಾಮಿಕ ವೈರಸ್‍ ತಗುಲಿದ ಅತಿಗಣ್ಯವ್ಯಕ್ತಿಗಳಲ್ಲಿ ಸ್ಮೃತಿ ಇರಾನಿ ಒಬ್ಬರಾಗಿದ್ದಾರೆ. ಈ ಹಿಂದೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಅನೇಕ ಸಚಿವರಿಗೆ ಮಾರಣಾಂತಿಕ ವೈರಸ್‌ ಸೋಂಕು ದೃಢಪಟ್ಟಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!