Belagavi

5 ತಿಂಗಳ ಮಗುವಿಗೆ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಕೆ.ಎಲ್.ಇ ವೈದ್ಯರ ತಂಡ

ಬೆಳಗಾವಿ. ಸೆ 28 – ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದ 15 ತಿಂಗಳ ಮಗುವಿಗೆ ಅತ್ಯಂತ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಕೆಮ್ಮು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದ ಈ ಮಗು ತೀವ್ರವಾಗಿ ಬೆವರುತ್ತಿತ್ತು. ಮಗುವಿನ ಬೆಳವಣಿಗೆ ಕುಂಠಿತವಾಗಿತ್ತು. ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕರೆ ತಂದಾದ ತಪಾಸಣೆಗೊಳಪಡಿಸಿದಾಗ ಹೃದಯದಲ್ಲಿ ರಂಧ್ರ ಇರುವುದು ಕಂಡು ಬಂತು. ತಡಮಾಡದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ. ಪ್ರವೀಣ ತಂಬ್ರಳ್ಳಿಮಠ ಹಾಗೂ ಅವರ ತಂಡವು ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಿ ಹೃದಯದಲ್ಲಿರುವ ರಂಧ್ರ ಸರಿಪಡಿಸಿದರು. ಒಂದು ವೇಳೆ ಶಸ್ತ್ರಚಿಕಿತ್ಸೆ ನಡೆಸದೇ ಇದ್ದಿದ್ದರೆ ಹೃದಯ ಮತ್ತು ಶ್ವಾಸಕೋಶ ಎರಡಕ್ಕೂ ಹಾನಿಯುಂಟಾಗುವ ಸಾಧ್ಯತೆ ಅಧಿಕವಾಗಿತ್ತು ಎನ್ನಲಾಗಿದೆ.

ಕೋವಿಡ್ ನಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳುವ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ, ನಂತರ ತೀವ್ರ ನಿಗಾ ಘಟಕದಲ್ಲಿ ಆರೈಕೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!