Bengaluru

ರಾಜ್ಯ ಸರಕಾರಿ ನೌಕರರಿಗೆ ಶುಭವಾರ್ತೆ

ಬೆಂಗಳೂರು, ೨೮- ಕೊರೋನಾ ಸೇರಿದಂತೆ ಅನೇಕ ಕಾರಣದಿಂದ ಸರಿಯಾದ ಸಮಯಕ್ಕೆ ಸಂಬಳ ಸಿಗದೇ ಪರದಾಡುತ್ತಿದ್ದ ರಾಜ್ಯ ಸರಕಾರದ ನೌಕರರಿಗೆ ಸರಕಾರ ಶುಭವಾರ್ತೆ ನೀಡಿದ್ದು ನವೆಂಬರ್ ದಿಂದ ಫೆಬ್ರವರಿಯವರೆಗೆ ತಿಂಗಳ ವೇತನ ಬರುವ ತಿಂಗಳ ಮೊದಲನೆಯ ವಾರದಲ್ಲೇ ದೊರೆಯಲಿದೆ.

ವಿವಿಧ ಕಾರಣಗಳಿಗೆ ವೇತನ ಪಾವತಿ ವಿಳಂಬವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಕ್ರಮಕೈಗೊಂಡಿದ್ದು ನವೆಂಬರ್ ನಿಂದ ಫೆಬ್ರವರಿವರೆಗಿನ 4 ತಿಂಗಳ ವೇತನವನ್ನು ಸಕಾಲದಲ್ಲಿ ನೌಕರರಿಗೆ ಆಯಾ ತಿಂಗಳುಗಳ ಮೊದಲನೆಯ ವಾರದಲ್ಲೇ ಬಟವಾಡೆ ಮಾಡಬೇಕೆಂದು ಸೂಚಿಸಿದೆ.

ಮುಂದಿನ ನಾಲ್ಕು ತಿಂಗಳ ವೇತನವನ್ನು ನಿರ್ದಿಷ್ಟ ಲೆಕ್ಕ ಶೀರ್ಷಿಕೆಯಡಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸೂಚಿಸಿದೆ. ನವೆಂಬರ್ ನಿಂದ ಫೆಬ್ರವರಿವರೆಗಿನ ಆಯಾ ತಿಂಗಳ ವೇತನವನ್ನು ಮೊದಲ ವಾರವೇ ನೌಕರರಿಗೆ ಪಾವತಿಸಲಾಗುವುದು ಎಂದು ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!