Shivamogga

ಖಾಲಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಹಕ್ಕು ಪತ್ರ ನೀಡಲು ಸರ್ಕಾರದ ತೀರ್ಮಾನ

ಶಿವಮೊಗ್ಗಅ 28- ರಾಜ್ಯದ ಯಾವುದೇ ಗ್ರಾಮೀಣ ಪ್ರದೇಶ ಮತ್ತು ನಗರಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿ ಯಾರು ಮನೆಗಳನ್ನು ಈಗಾಗಲೇ ಕಟ್ಟಿಕೊಂಡಿದ್ದಾರೋ ಅವರೆಲ್ಲರಿಗೆ ಅಲ್ಲಿನ ಹಕ್ಕು ಪತ್ರ ನೀಡುವ ತೀರ್ಮಾನವನ್ನು ಈಗಾಗಲೇ ರಾಜ್ಯದಲ್ಲಿ ತೆಗೆದುಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಎಲ್ಲವೂ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಹಕ್ಕುಪತ್ರ ಹಂಚಿಕೆ ಆಶ್ರಯ ಸಮಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಆಶ್ರಯ ಸಮಿತಿಗಳನ್ನು ಮಾಡಿಭೂಮಿ ಖರೀದಿ ಮಾಡಿ ರಾಜ್ಯ ಸರ್ಕಾರದಿಂದ ಸಬ್ಸಿಡಿ ಕೊಟ್ಟು ಕೇಂದ್ರ ಸರ್ಕಾರದ ಸಬ್ಸಿಡಿ ಕೊಟ್ಟು ಫಲಾನುಭವಿಗಳಿಂದ ಕೂಡ ಹಣ ತೆಗೆದುಕೊಂಡು ಬ್ಯಾಂಕ್ ಸಾಲ ಕೂಡ ಕೊಡಿಸಿ ಕಡು ಬಡವರಿಗೆ ಮನೆಗಳನ್ನು ಕಟ್ಟಿಕೊಡಬೇಕೆಂಬ ವಿಶೇಷವಾದ ಯೋಜನೆಯೇ ಈ ಆಶ್ರಯ ಯೋಜನೆ ಎಂದು ಹೇಳಿದರು.

Leave a Reply

Your email address will not be published. Required fields are marked *

Back to top button
error: Content is protected !!