New Delhi

ದೇಶದಲ್ಲಿ 80 ಲಕ್ಷದ ಗಡಿ ತಲುಪುತ್ತಿರುವ ಪಾಸಿಟಿವ್ ಪ್ರಕರಣಗಳ ಸಂಖ್ಯೆ

ನವದೆಹಲಿ, ಅ 28- ದೇಶದಲ್ಲಿ ಕೊರೊನಾ ವೈರಸ್‌ ಪಾಸಿಟಿವ್ ಪ್ರಕರಣಗಳ ಸಂಖ್ಯೆ 80 ಲಕ್ಷದ ಗಡಿ ತಲುಪುತ್ತಿವೆ. ಕಳೆದ 24 ಗಂಟೆಗಳಲ್ಲಿ 43,893 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಇದರಿಂದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 79,90,322 ಕ್ಕೆ ತಲುಪಿವೆ. ನಿನ್ನೆ ಒಂದೇ ದಿನದಲ್ಲಿ 508 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಇದರಿಂದ ಒಟ್ಟು 1,20,010 ಮಂದಿ ಮೃತಪಟ್ಟಂತಾಗಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ನಿನ್ನೆ 58,439 ಮಂದಿ ಸೋಂಕಿತರು ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದರಿಂದ ಒಟ್ಟು ಗುಣ ಮುಖಗೊಂಡವರ ಸಂಖ್ಯೆ 72,59,509ರಷ್ಟಾಗಿದೆ.

ಪ್ರಸ್ತುತ ದೇಶಾದ್ಯಂತ ವೈದ್ಯರ ನಿಗಾದಲ್ಲಿರುವ ಪ್ರಕರಣಗಳ ಸಮಖ್ಯೆ 6,10,803 ರಷ್ಟಿವೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 10,83,608 ಮಾದರಿ ಪರೀಕ್ಷಿಸಲಾಗಿದ್ದು, ಈವರೆಗೆ ಒಟ್ಟು 9,72,00,379 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಹೇಳಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!