New Delhi

ನವೆಂಬರ್ 30 ರ ವರೆಗೆ ಶಾಲೆ ಪುನಾರಂಭಿಸದಿರಲು ಕೇಂದ್ರ ಆದೇಶ

ಹೊಸದೆಹಲಿ, 28- ಮಾರಕವಾಗಿ ಪರಿವರ್ತನೆಯಾಗಿರುವ ಕೊರೋನಾ ವೈರಸ್ ಇನ್ನೂ ಹತೋಟಿಗೆ ಬರದಿರುವದರಿಂದ ಶಾಲೆಗಳನ್ನು ನವೆಂಬರ್ 30 ರ ವರೆಗೆ ಪುನಃ ಆರಂಭಿಸದಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಆದೇಶಿಸಿದೆ.

ನವೆಂಬರ್ ನಲ್ಲಿ ಹಲವು ರಾಜ್ಯಗಳು ಶಾಲೆಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳುತ್ತಿವೆ. ಆದರೆ ಕೊರೊನಾ ಸೋಂಕು ಹಲವು ರಾಜ್ಯಗಳಲ್ಲಿ ಹೆಚ್ಚುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

ಈ ಹಿಂದೆ ಅಗಸ್ಟ್ 30ರಂದು ಹೊರಡಿಸಲಾಗಿರುವ ಮಾರ್ಗಸೂಚಿ ನವೆಂಬರ್ 30ರ ವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಶಾಲೆಗಳನ್ನು ತೆರೆಯುವ ಕುರಿತು ಈಗಾಗಲೇ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು. ವಿದ್ಯಾಗಮ ಯೋಜನೆಯಿಂದಲೂ ಕೊರೊನಾ ಸೋಂಕು ಹರಡಿದ್ದರಿಂದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.

ಈ ನಡುವೆ ಇದೀಗ ನವೆಂಬರ್ 30ರ ವರೆಗೆ ಶಾಲೆಗಳನ್ನು ತೆರೆಯದಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿ ರುವುದರಿಂದಾಗಿ ವರ್ಷಾಂತ್ಯದವರೆಗೆ ಶಾಲೆಗಳು ಪುನರಾರಂಭವಾಗುವುದು ಅನುಮಾನ ಎನಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!