Lucknow

ಅನಿಯಂತ್ರಿತ ಹಣದುಬ್ಬರದ ಕುರಿತು ಬಿಜೆಪಿ ಮೌನ; ಪ್ರಿಯಾಂಕಾ

ಲಖನೌ, ಅ 27- ಹಬ್ಬದ ಸಮಯದಲ್ಲಿ ಕಂಡುಬಂದಿರುವ ಅನಿಯಂತ್ರಿತ ಹಣದುಬ್ಬರದಿಂದ ಉತ್ತರಪ್ರದೇಶದ ಜನರು ಬೇಸತ್ತಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಆರೋಪಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಅವರು, ಹಬ್ಬದ ಸಮಯದಲ್ಲಿ ಇಡೀ ಉತ್ತರಪ್ರದೇಶದ ತುಂಬಾ ಹಣದುಬ್ಬರ ತಾಂಡವವಾಡುತ್ತಿತ್ತು. ತರಕಾರಿಯ ಬೆಲೆ ಏರಿಕೆಯಾಗಿತ್ತು. ಜನಜೀವನ ಸ್ಥಗಿತಗೊಂಡಿದೆ. ಆದರೆ, ಬಿಜೆಪಿ ಸರ್ಕಾರ ಸುಳ್ಳು ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದೆ ಎಮದು ಆರೋಪಿಸಿದರು.

ಸ್ವಾನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಪ್ರಧಾನ ಮಂತ್ರಿಯ ವರ್ಚುವಲ್ ಸಂವಾದದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, “ಇಂದು ಪ್ರಧಾನಿ ಕೆಲವು ಬೀದಿಬದಿ ವ್ಯಾಪಾರಿಗಳೊಂದಿಗೆ ಮಾತನಾಡಲಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿ ಮಾಲೀಕರ ಮೇಲೆ ಲಾಕ್‌ಡೌನ್‌ ಕೆಟ್ಟ ಪರಿಣಾಮ ಬೀರಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಇಂದು ಅವರಿಗೆ ಸಾಲದ ಅಗತ್ಯವಿಲ್ಲ. ವಿಶೇಷ ನೆರವಿನ ಪ್ಯಾಕೇಜ್‌ ಅಗತ್ಯವಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!