New Delhi

ದೇಶದಲ್ಲಿ 36,470 ಹೊಸ ಪ್ರಕರಣ

ನವದೆಹಲಿ, ಅ 25 – ಭಾರತದಲ್ಲಿ ಕಳೆದ 24 ತಾಸಿನಲ್ಲಿ ಕೋವಿಡ್‍-19ನ 36,470 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 79,46,429ಕ್ಕೆ ಏರಿದೆ.

ಇದೇ ಅವಧಿಯಲ್ಲಿ 488 ಮಂದಿ ಸೋಂಕಿನಿಂದ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,19,502ಕ್ಕೆ ಏರಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ, ದೇಶದಲ್ಲಿ ಸಕ್ರಿಯ ಪ್ರಕರಣಗಳು 27,860 ರಷ್ಟು ಕುಸಿದಿದ್ದು, ಸದ್ಯ ಒಟ್ಟು ಸಂಖ್ಯೆ 6,25,857 ರಷ್ಟಿದೆ. ಇದು ಈವರೆಗೆ ವರದಿಯಾಗಿರುವ 79,46,429 ಪ್ರಕರಣಗಳ ಪೈಕಿ ಶೇ 7.88 ರಷ್ಟಿದೆ.

ಕೆಲದಿನಗಳ ಹಿಂದೆಯಷ್ಟೇ ದೈನಂದಿನ ಪ್ರಕರಣಗಳ ಸಂಖ್ಯೆ 50,000ಕ್ಕೂ ಹೆಚ್ಚು ವರದಿಯಾಗುತ್ತಿತ್ತು. ಆದರೆ ಇದೀಗ ದೈನಂದಿನ ಪ್ರಕರಣಗಳಲ್ಲಿ 10ರಿಂದ 15 ಸಾವಿರದಷ್ಟು ಕುಸಿತ ಕಂಡುಬರುತ್ತಿರುವುದು ಆಶಾದಾಯಕ ಬೆಳವಣಿಗೆಯೆಂದು ಭಾವಿಸಲಾಗಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!