Muddebihal

ಕಾರ್ ಪಲ್ಟಿ; ಫ್ರೆಂಡ್ಸ್ ಧಾಬಾ ಮಾಲೀಕ ಪೇಟಗಾರ ಸಾವು

ಮುದ್ದೇಬಿಹಾಳ, ೨೬- ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಫ್ರೆಂಡ್ಸ್ ಧಾಬಾ ಮಾಲಿಕ ವಿರೇಶ ಪೇಟಗಾರ ಸ್ಥಳದಲ್ಲೇ ಅಸುನೀಗಿದ್ದು ಅವರ ಜೊತೆಗಿದ್ದ ರುದ್ರಗಂಟಿ ಬಸಯ್ಯ ತೆಗ್ಗಿನಮಠ ಗಂಭೀರವಾಗಿ ಗಾಯಗೊಂಡಿದ್ದಾರೆ.

ದುರ್ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಬಳಿಯ ಮಸ್ಕ್ ಪೂಲ್ ಬಾಳದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!