Belagavi

ಶೇಖ ಮೆಡಿಕಲ್ ಕಾಲೇಜ್ ಬಳಿ ಯುವಕನ ಭೀಕರ ಹತ್ಯೆ

ಬೆಳಗಾವಿ, 26- ಬೆಳಗಾವಿಯ ಅಜಮ ನಗರ್ ನಿವಾಸಿ ಶಹಬಾಜ ಪಠಾಣ ಅಲಿಯಾಸ್ ಎಂಬಾತನನ್ನು ಎ ಎಂ ಶೇಖ ಮೆಡಿಕಲ್ ಕಾಲೇಜ್ ಬಳಿ ಭೀಕರವಾಗಿ ಇರಿದು ಹತ್ಯೆ ಮಾಡಲಾಗಿದೆ.

ಈ ಘಟನೆ ರವಿವಾರ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಸಂಭವಿಸಿದೆ. ಕಮರ್ಷಿಯಲ್ ಏರಿಯಾ ಆಗಿರುವ ಈ ಪ್ರದೇಶ ಘಟನೆ ನಡೆದಾಗ ಜನರಿಂದ ತುಂಬಿತ್ತು. ನಂತರ ತಕ್ಷಣ ಖಾಲಿಯಾಯಿತು.

ಇರಿತದಿಂದ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದ ಶಹಬಾಜ ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು, ಅಲ್ಲಿ ಅಸುನೀಗಿದರು. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದಾಗ ನೂರಾರು ಯುವಕರು ಸೇರಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಅವರನ್ನು ಚದುರಿಸಿದರು.

ಹಣಕಾಸಿನ ವ್ಯವಹಾರವೇ ಈ ಹತ್ಯೆಗೆ ಕಾರಣವೆನ್ನಲಾಗಿದೆ. ಕೊಲೆಯಾದ ವ್ಯಕ್ತಿ ಕಾಕತಿಯಲ್ಲಿ ಇಬ್ಬರನ್ನು ಇರಿದು ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ. ಅವನು ಗೋವೆಗೆ ಹೋಗಿ ಅಡಗಿಕೊಂಡಿದ್ದ ಎಂದು ಹೇಳಲಾಗಿದೆ.

ಕೊಲೆಗೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!